ರಾಷ್ಟ್ರೀಯ ಹೆದ್ದಾರಿ 169 A ಉಡುಪಿ ಕರಾವಳಿ ಬೈಪಾಸ್ ನಿಂದ ಮಣಿಪಾಲ ಸಿಂಡಿಕೇಟ್ ಸರ್ಕಲ್ ವರೆಗಿನ ಅಗತ್ಯ ಕಾಮಗಾರಿಗಳ ಬಗ್ಗೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಉಡುಪಿ ನಗರಸಭೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರಾವಳಿ ಜಂಕ್ಷನ್ ಬಳಿಯಿಂದ ಬನ್ನಂಜೆ ನಾರಾಯಣ ಗುರು ಸರ್ಕಲ್ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ಬನ್ನಂಜೆ ಜಂಕ್ಷನ್ ಅಭಿವೃದ್ಧಿ, ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಮರು ಅಳವಡಿಕೆ, ಕಡಿಯಾಳಿ ಕುಂಜಿಬೆಟ್ಟು ಭಾಗದಲ್ಲಿ ಚರಂಡಿ ನಿರ್ಮಾಣ, ಶಾರದಾ ಕಲ್ಯಾಣ ಮಂಟಪ ಜಂಕ್ಷನ್ ಅಭಿವೃದ್ಧಿ, ಎಂ.ಜಿ. ಎಂ. ಕಾಲೇಜಿನ ಬಳಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ರಸ್ತೆಯ ವರೆಗೆ ಇಂಟರ್ ಲಾಕ್ ಅಳವಡಿಕೆ, ಲಕ್ಷ್ಮೀಂದ್ರನಗರ ಬಳಿ ವ್ಯವಸ್ಥಿತ ಚರಂಡಿ ನಿರ್ಮಾಣ, ಇಂದ್ರಾಳಿ ಸೇತುವೆ ಬಳಿ ಶಾಲೆಗೆ ಸಂಪರ್ಕಿಸುವಂತೆ ಸರ್ವಿಸ್ ರಸ್ತೆ ನಿರ್ಮಾಣ, ಅಗತ್ಯ ಸ್ಥಳಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುವ ಬಗ್ಗೆ ತಕ್ಷಣ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭೆಯ ಮೂಲಕ ಈಗಾಗಲೇ ಮಂಜೂರುಗೊಂಡಿರುವ ಎಂ. ಜಿ. ಎಂ. ಕಾಲೇಜು ಮುಂಭಾಗ ಹಾಗೂ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ತಕ್ಷಣ ಆರಂಭಕ್ಕೆ ಕ್ರಮ ವಹಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಹರೀಶ್ ರಾಮ್ ಬನ್ನಂಜೆ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಗಿರೀಶ್ ಅಂಚನ್, ಟಿ. ಜಿ. ಹೆಗ್ಡೆ, ಸ್ಥಳೀಯ ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಸತೀಶ್ ಭಾಗವತ್, ಧನ್ಯವಂತ ಪ್ರಭು ಬನ್ನಂಜೆ, ಉಡುಪಿ ನಗರಸಭೆ ಪೌರಾಯುಕ್ತರಾದ ಮಹಾಂತೇಶ ಹಂಗರಗಿ, ಇಂಜಿನಿಯರ್ ಕಾರ್ತಿಕ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಮಂಜನ್ ಗೌಡ, ನವೀನ್ ರಾಜ್, ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.

