ಕಡಂದಲೆ ವಿದ್ಯಾರ್ಥಿ ನಿಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
13

ಮೂಡುಬಿದಿರೆ : ಜೆಸಿಐ ಮುಂಡ್ಕೂರು ಭಾರ್ಗವ ಹಾಗೂ ಪತಂಜಲಿ ಯೋಗ ಪರಿವಾರ, ಮೂಡುಬಿದಿರೆ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಡಂದಲೆ ಪೂಪಡಿಕಲ್ಲು ವಿದ್ಯಾರ್ಥಿ ನಿಲಯದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶಾಂತಿಪ್ರಸಾದ್ ಹೆಗ್ಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಓಸ್ವಾಲ್ಡ್, ಜಗದೀಶ್ ಪೂಜಾರಿ, ನಾರಾಯಣ, ಅರುಣ್ ಹಾಗೂ ಕಿಶೋರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಜೆಸಿಐ ಮುಂಡ್ಕೂರು ಭಾರ್ಗವದ ಪೂರ್ವಾಧ್ಯಕ್ಷ ಸುರೇಂದ್ರ ಭಟ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪತಂಜಲಿ ಯೋಗ ಪರಿವಾರದ ಯೋಗ ತರಬೇತುದಾರರು ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಮಹತ್ವದ ಕುರಿತು ಮಾಹಿತಿ ನೀಡಿ ಪ್ರಾಯೋಗಿಕ ತರಬೇತಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವದ ಪೂರ್ವಾಧ್ಯಕ್ಷರಾದ ಸುರೇಂದ್ರ ಭಟ್, ಗಣೇಶ್ ಆಚಾರ್ಯ, ಸುಧಾಕರ್ ಪೊಸ್ರಾಲ್, ಲೇಡಿ ಜೆಸಿ ಸಂಯೋಜಕಿ ಅಶ್ವಿನಿ ಅಮೀನ್, ಜೆಸಿ ಸದಸ್ಯೆ ಸೌಮ್ಯ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here