₹ 1.05 ಕೋಟಿ ವೆಚ್ಚದಲ್ಲಿ ಉಪ್ಪೂರು ಗ್ರಾಮದ ವಿವಿಧ ರಸ್ತೆ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

0
8

ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.05 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲ್ಲಿರುವ
ವಿವಿಧ ರಸ್ತೆ ಕಾಮಗಾರಿಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನಡೆಸಿ ಚಾಲನೆ ನೀಡಿದರು.

ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಮುಂಜೆ ಸಂದೀಪ್ ರವರ ಮನೆಯ ಬಳಿಯಿಂದ ಉದಯ ಪೂಜಾರಿ ರವರ ಮನೆಯವರೆಗೆ ರಸ್ತೆ ಕಾಮಗಾರಿಗೆ 25 ಲಕ್ಷ, ಉಗ್ಗೇಲ್ ಬೆಟ್ಟು ಸುಮತಿ ರವರ ಮನೆಯಿಂದ ಸದಾಶಿವ ಬಂಗೇರ ರವರ ಮನೆಯ ತನಕ ರಸ್ತೆ ಕಾಮಗಾರಿಗೆ 25 ಲಕ್ಷ, ಮೂಡು ಅಮ್ಮುಂಜೆ ದಿನೇಶ್ ಶೆಟ್ಟಿ ರವರ ಮನೆಯಿಂದ ಕೃಷ್ಣ ಪೂಜಾರಿ ರವರ ಮನೆಯವರೆಗೆ ರಸ್ತೆ ಕಾಮಗಾರಿಗೆ 25 ಲಕ್ಷ, ಅಮ್ಮುಂಜೆ ಬೇಬಿ ರವರ ಮನೆಯಿಂದ ಗಿರಿಜಾ ಬಂಗೇರ ರವರ ಮನೆಯವರೆಗೆ ರಸ್ತೆ ಕಾಮಗಾರಿಗೆ 20 ಲಕ್ಷ, ಉಗ್ಗೇಲ್ ಬೆಟ್ಟು ಪಿಳ್ಕಲ ಶೇಖರ್ ಪೂಜಾರಿ ಮನೆಯಿಂದ ಮಡಿವಾಳರ ಬೆಟ್ಟು ವರೆಗೆ ರಸ್ತೆ ಕಾಮಗಾರಿಗೆ 10 ಲಕ್ಷ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿದ್ದು, ಉಪ್ಪೂರು ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿ ಅತೀ ಶೀಘ್ರದಲ್ಲಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಶ್ ಕೋಟ್ಯಾನ್, ರಾಜು ಪೂಜಾರಿ , ಸತೀಶ್ ಪೂಜಾರಿ, ಸುರೇಶ ಪೂಜಾರಿ, ಹೆರಿಯ, ಅಶ್ವಿನ್ ರೋಚ್, ಪ್ರಭಾಕರ, ಬೇಬಿ, ಶಾರದಾ, ಮಮತಾ, ಅಮ್ಮಣಿ, ವಸಂತಿ, ಆಶಾ, ಸಂಗೀತಾ, ಸುಜಾತ,ರಾಘವೇಂದ್ರ ಉಪ್ಪೂರು, ಕಿಟ್ಟ ಪೂಜಾರಿ, ಕೇಶವ ಪೂಜಾರಿ, ಪ್ರವೀಣ್ ಪೂಜಾರಿ, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು