ಮೂಡುಬಿದಿರೆ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 35ನೇ ಶಾಖೆ ಉದ್ಘಾಟನೆ

0
29

ಸಂಘಟನೆಗಳು ಸಂಸ್ಥೆಗಳಾಗಿ ಮುಂದುವರಿದರೆ ಯಶಸ್ಸು : ತಾರಾನಾಥ ಪೂಜಾರಿ

ಮೂಡುಬಿದಿರೆ : ಸಂಘಟನೆಗಳು ಸಂಸ್ಥೆಗಳಾಗಿ ಮುಂದೆ ಸಾಗಿದಾಗ ಸಂಘಟನೆಯ ಶಕ್ತಿಗೆ ಬೆಲೆ ಬರುತ್ತದೆ. ಈ ಸಹಕಾರ ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರವಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ.ತಾರಾನಾಥ ಪೂಜಾರಿ ಯವರು ಹೇಳಿದರು.

ಮಂಗಳೂರಿನ ಪಡೀಲ್ ನಲ್ಲಿ ಸ್ವಂತ ಆಡಳಿತ ಕಟ್ಟಡ ಹೊಂದಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 35ನೇ ಶಾಖೆಯನ್ನು ಮೂಡುಬಿದಿರೆ ಅಂಚೆ ಕಚೇರಿ ಎದುರಿನ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ನಡವಳಿಕೆ ಹಾಗೂ ಉತ್ತಮ ಉದ್ದೇಶವಿದ್ದರೆ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆ ಅಗತ್ಯವಾಗಿದ್ದು, ವ್ಯಾಜ್ಯಗಳಿಂದ ಆದಷ್ಟು ದೂರವಿರಬೇಕು ಎಂದರು.

ಮೂಲ್ಕಿ- ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಉಮಾನಾಥ ಎ ಕೋಟ್ಯಾನ್ ರವರು ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಬಲೀಕರಣದ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಹೆಣ್ಣು ಮಕ್ಕಳ ಮದುವೆಗೆ ಸಾಲ ನೀಡಲಾಗುತ್ತಿದೆ. ಶಿಕ್ಷಣ, ಸಾಮಾಜಿಕ ಸೇವೆಗಳಿಗೂ ಈ ಸಂಸ್ಥೆ ಆದ್ಯತೆ ನೀಡುತ್ತಿದೆ. ಶೇ.95ರಷ್ಟು ಮಂದಿ ಮಹಿಳಾ ಸಿಬ್ಬಂದಿ ಇಲ್ಲಿದ್ದು, ದಕ್ಷ ಆಡಳಿತ ಮಂಡಳಿಯೂ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿರುವ ಐ ತಾರನಾಥ ಪೂಜಾರಿ ಹಾಗು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.100 ಅಂಕ ಗಳಿಸಿದ ಕುಮಾರಿ ದಿಶಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಲಿ.) ಮಂಗಳೂರು. ಇದರ ನಿರ್ದೇಶಕರಾದ “ಸಹಕಾರ ರತ್ನ” ಭಾಸ್ಕರ್ ಎಸ್ ಕೋಟ್ಯಾನ್, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ.) ಮೂಡಬಿದ್ರಿಯ ಅಧ್ಯಕ್ಷರಾದ ಸುರೇಶ್ ಕೆ. ಪೂಜಾರಿ, ವಕೀಲರ ಸಂಘ ಮೂಡಬಿದ್ರಿಯ ಅಧ್ಯಕ್ಷರಾದ ಹರೀಶ್ ಪಿ. ಯುವವಾಹಿನಿ (ರಿ.) ಮೂಡಬಿದ್ರಿ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಬೆಳ್ತಂಗಡಿಯ ಉಪಾಧ್ಯಕ್ಷರಾದ ಜಗದೀಶ್ಚಂದ್ರ ಡಿ.ಕೆ, ಪ್ರೆಸ್ ಕ್ಲಬ್ ಮೂಡಬಿದ್ರಿಯ ಅಧ್ಯಕ್ಷರಾದ ಸೀತಾರಾಮ್ ಆಚಾರ್ಯ, ಆತ್ಮಶಕ್ತಿ ಸಹಕಾರಿ ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ ಎನ್., ರಾಮನಾಥ ಸನಿಲ್, ಮುದ್ದುಮೂಡುಬೆಳ್ಳೆ, ದಿವಾಕರ ಬಿ.ಪಿ. ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯಾ ವಿಜಯ್ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪೂಜಾರಿ ರವರು ವಂದಿಸಿದರು. ವಿಶ್ವನಾಥ ರೆಂಜಾಳ ರವರು ನಿರೂಪಿಸಿದರು.

ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಪ್ರಯುಕ್ತ 500 ದಿನಗಳ ಠೇವಣಿಗಳಿಗೆÂ ವಿಶೇಷ ಬಡ್ಡಿ ದರ ಶೇ. 10. ಹಾಗೂ 1000 ದಿನಗಳ ಠೇವಣಿಗಳಿಗೆÂ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. 12,000/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲವನ್ನು ಸದಸ್ಯರಿಗೆ ನೀಡಲಾಗುವುದು. ನಮ್ಮ ಎಲ್ಲಾ ಶಾಖೆಗಳಲ್ಲಿ ಇ-ಮುದ್ರಾಂಕ, ನೆಫ್ಟ್, ಆರ್‌ಟಿಜಿಎಸ್ ಸೇವೆಯು ವ್ಯವಹಾರದ ಸಮಯದಲ್ಲಿ ಲಭ್ಯವಿದ್ದು, ಅದೇ ರೀತಿ ವಿಮಾ ಪಾಲಿಸಿಗಳಾದ ಎಲ್‌ಐಸಿ, ಕೇರ್, ಇಫ್ಕೋಟೋಕಿಯ, ಜನರಲ್ ಇನ್ಸುರೆನ್ಸ್ ಕಂಪೆನಿ ಮುಂತಾದ ಕಂಪೆನಿಗಳ ವಿಮಾ ಸೌಲಭ್ಯಗಳು ಲಭ್ಯವಿದೆ.

LEAVE A REPLY

Please enter your comment!
Please enter your name here