‘ರಾಗ ಸಂಧ್ಯಾ’ ಭಕ್ತಿ ಸಂಗೀತ ಕಾರ್ಯಕ್ರಮ ಯಶಸ್ವಿ

0
23

ಮಂಗಳೂರು : ರಾಮಕೃಷ್ಣ ಮಿಷನ್, ಮಂಗಳೂರು ವತಿಯಿಂದಅಮೃತ ವರ್ಷೋತ್ಸವದ ಅಂಗವಾಗಿ ಆಯೋಜಿಸಲಾದ ವಿಶೇಷ ಭಕ್ತಿ ಸಂಗೀತಕಾರ್ಯಕ್ರಮ “ರಾಗ ಸಂಧ್ಯಾ” ವು ಏಪ್ರಿಲ್ 19, 2026 ರಂದು ಸ್ವಾಮಿ ವಿವೇಕಾನಂದ ಸಭಾಂಗಣ, ರಾಮಕೃಷ್ಣ ಮಠ, ಮಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಜೆ. ಕೃಷ್ಣ ಪಾಲೆಮಾರ್ (ಮಾಜಿ ಸಚಿವರು, ಕರ್ನಾಟಕ ಸರ್ಕಾರ) ಅವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆಸ್ವಾಮಿಜಿತಕಾಮಾನಂದಜಿ,ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು ಅಧ್ಯಕ್ಷತೆ ವಹಿಸಿದರು.

ಖ್ಯಾತಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರ ಮನಮೋಹಕ ಗಾಯನವು ಶ್ರೋತೃಗಳನ್ನು ಭಕ್ತಿರಸದೊಳಗೆ ಮುಳುಗಿಸಿತು. ತಬಲದಲ್ಲಿ ಮಾಯಾಂಕ್ ಬೇಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಪ್ರಸಾದ್‌ಕಾಮತ್‌ಅವರು ಸಹವಾದ್ಯ ನೀಡಿದರು.

ಭಕ್ತಿ ಮತ್ತು ಸಂಗೀತದ ಸುಂದರ ಸಂಯೋಜನೆಯಾಗಿಕಾರ್ಯಕ್ರಮವು ಶ್ರೋತೃಗಳಿಗೆ ಆಧ್ಯಾತ್ಮಿಕಆನಂದವನ್ನು ನೀಡಿತು. ಸಂಗೀತಾಸಕ್ತರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here