ಮೂಡುಬಿದಿರೆ: ಜೈನ್ ಪೇಟೆ ಬಳಿಯ ದೇವಿಕೃಪಾ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಎಂಜಿನಿಯರ್ ಸುಧಾಕರ ಆಚಾರ್ಯ (45) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ಬುಧವಾರದಂದು ಸುಮಾರು ಸಂಜೆಯ ಹೊತ್ತಿಗೆ ಮೂರನೇ ಮಹಡಿಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಪಾರ್ಟ್‌ಮೆಂಟಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೋಲಿಸರು ಬಂದು ನೋಡಿದಾಗ ಸುಧಾಕರ್ ಅವರು ಮಲಗಿದ್ದಲ್ಲಿಯೇ ರಕ್ತಕಾರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದ್ದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದೆ. ಘಟನೆಗೆ ನಿಖರ ಕಾರಣ ಇನ್ನು ತಿಳಿದಿಲ್ಲ. ಅವರು ಮೂಲತಃ ಚಿಕ್ಕಮಗಳೂರಿನವರು.
ಶಿಕ್ಷಕಿಯಾಗಿರುವ ಪತ್ನಿ ಮತ್ತು 11ರ ಹರೆಯದ ಪುತ್ರನನ್ನು ಅವರು ಅಗಲಿದ್ದಾರೆ. ಸುಧಾಕರ ಆಚಾರ್ಯ ಅವರ ಪತ್ನಿಯು ಕೆಲವು ದಿನಗಳಿಂದ ಮಗನ ಜತೆಗೆ ತನ್ನ ಸಹೋದರನ ಮನೆಯಲ್ಲಿದ್ದರೆಂದೂ ಘಟನೆ ನಡೆದು ಒಂದೆರಡು ದಿನಗಳಾಗಿಬಹುದೆಂದೂ ಹೇಳಲಾಗುತ್ತಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.