ಮೌಂಟ್ ರೋಸರಿ ಆಸ್ಪತ್ರೆ ಅಲಂಗಾರು ಮೂಡುಬಿದಿರೆ , ಯುವವಾಹಿನಿ (ರಿ. ) ಮೂಡುಬಿದಿರೆ ಘಟಕ ಮತ್ತು ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಮೂಡುಬಿದಿರೆ. ಅಪೋಲೋ ಫಾರ್ಮಸಿ ಮೂಡುಬಿದಿರೆ, ವಿ ಹೆಲ್ಪ್ ಟ್ರಸ್ಟ್ (ರಿ) ಅಲಂಗಾರು ಮೂಡುಬಿದಿರೆ. ಇವರ ಜಂಟಿ ಆಶ್ರಯದಲ್ಲಿ ರಿಕ್ಷಾ ಚಾಲಕರಿಗೆ ಉಚಿತ ಹೃದಯ ರೋಗ ಜಾಗೃತಿ ಮತ್ತು ತಪಾಸಣಾ ಶಿಬಿರವು ಮೌಂಟ್ ರೋಜರಿ ಅಸ್ಪತ್ರೆಯಲ್ಲಿ ನಡೆಯಿತು.
ಹೃದಯ ರೋಗತಜ್ಞರಾದ ಡಾ.ದೀತೇಶ್ ಎಂ. ಮಾತನಾಡಿ ಹೃದಯದ ಹಾರೈಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಮೌಂಟ್ ರೋಸರಿ ಸಂಸ್ಥೆಯ ಸುಪೀರಿಯರ್ ಜನರಲ್ ಸಿಸ್ಟರ್ ಸುನೀತಾ ಶಿಬಿರಕ್ಕೆ ಶುಭಹಾರೈಯ ನುಡಿಯನ್ನು ನುಡಿದರು. ಡಾll ಮಧುಮಾಲ ಮಾತನಾಡಿ ಮಾನಸಿಕ ಆರೋಗ್ಯವೂ ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯ ಎಂದರು.ಅಸ್ಪತ್ರೆಯ ನಿರ್ದೇಶಕರಾದ ಸಿಸ್ಟರ್ ಪ್ರೆಸಿಲ್ಲ ಡಿಮೆಲ್ಲೊ ಅಧ್ಯಕ್ಷೀಯ ನೆಲೆಯಲ್ಲಿ ಮಾತಾನಾಡಿ ಶಿಬಿರಕ್ಕೆ ಶುಭ ಹಾರೈಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಮೆಬಲ್ ಪಸ್ಸನ್ನ, ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಡಾ. ಪುನೀತ್ ಜೀ ಪಕ್ಕಲ್,ಯುವವಾಹಿನಿ ಮೂಡಬಿದಿರೆ ಘಟಕದ ಅಧ್ಯಕ್ಷ ಮುರುಳಿದರ್ ಕೋಟ್ಯಾನ್, ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ದೀಪಕ್ ಅಪೋಲೋ ಪಾರ್ಮಸಿ ಮೂಡಬಿದಿರೆ ವಿಭಾಗದ ಮುಖ್ಯಸ್ಥರಾದ ಶರತ್ ಉಪಸ್ಥಿತರಿದ್ದರು ಮಾನವ ಸಂಪನ್ಮೂಲ ಅಧಿಕಾರಿ ವಿನಿತ್ ಅಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ತಿಳಿಸಿದರು. ವಿಮಾ ಅಧಿಕಾರಿ ಅನೀಲ್ ಸ್ವಾಗತಿಸಿದರು, ಕಾವ್ಯ ವಂದಿಸಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ ಶುಭಕರ್ ಅಂಚನ್ ಕಾರ್ಯಕ್ರಮ ನಿರೂಪಣೆ ಗೈದರು.