ಮೂಡುಬಿದಿರೆ ಕಲ್ಲಬೆಟ್ಟು ವೈಬ್ರೆಂಟ್ ಡೇ 2025

0
72

ವರದಿ ರಾಯಿ ರಾಜ ಕುಮಾರ .

ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ನ್ಯೂ ವೈಬ್ರೆಂಡ್ ಪಿ ಯು ಕಾಲೇಜಿನ ತೃತೀಯ ವಾರ್ಷಿಕೋತ್ಸವ ಡಿಸೆಂಬ‌ರ್ 26ರಂದು ಜರಗಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ, ಸಾಹಿತಿ ಡಾ. ಎಮ್ ವೀರಪ್ಪ ಮೊಯ್ಲಿ ಮಾತನಾಡಿ ಇಡೀ ದೇಶಕ್ಕೆ ಮಾದರಿಯಾಗುವಂತೆ ಸಾಕಷ್ಟು ಪೈಪೋಟಿಯ ನಡುವೆಯೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಹಿಂದೆ ನೋಡದೆ ದಿಟ್ಟ ಹೆಜ್ಜೆಯಿಂದ ಮುಂದುವರೆಯುವವರಿಗೆ ಖಂಡಿತ ಯಶಸ್ಸು ಸಿಗುತ್ತದೆ. ಶಿಕ್ಷಣದಿಂದ ಭೇದಭಾವ ದೂರವಾಗಿ ಜ್ಞಾನವನ್ನು ಸಂಪಾದಿಸಿ, ಬಾಳನ್ನು ಬೆಳಗಿಸಿಕೊಳ್ಳಲು ದಾರಿಯಾಗುತ್ತದೆ. ಆದರೆ ದೇಶವನ್ನು ಪ್ರೀತಿಸಿ, ನೆಲ ಜಲ ಪರಿಸರವನ್ನು ರಕ್ಷಿಸುವಂತೆ ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಸುರತ್ಕಲ್ ಎನ್‌ಐಟಿಕೆಯ ಪ್ರೊಫೆಸರ್, ವಿಜ್ಞಾನಿ, ಸಂಶೋಧಕ ಡಾ. ಎಂ ಎನ್ ಸತ್ಯನಾರಾಯಣ ಅವರನ್ನು ವೈಬ್ರೆಂಡ್ ವಿಜ್ಞಾನ ರತ್ನ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು. ಮಾಜಿ ಸಚಿವ ಅಭಯ ಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್ ಮಾತನಾಡಿದರು. ಕಾಲೇಜಿನ ಟ್ರಸ್ಟಿ ಶೇಖ್ ಮಹಮ್ಮದ್ ಪಾಷಾ ಅಧ್ಯಕ್ಷತೆ ವಹಿಸಿದ್ದರು. ಇತರ ಟ್ರಸ್ಟಿಗಳಾದ ಚಂದ್ರಶೇಖ‌ರ್ ರಾಜೆ ಅರಸ್, ಸುಭಾಷ್ ಝಾ, ಡಾ. ಶರತ್ ಗೋರೆ, ಅಮರೇಶ್ ವಟಗಲ್, ಯೋಗೀಶ್ ಬೇಡೇಕ‌ರ್ ವೇದಿಕೆಯಲ್ಲಿ ಹಾಜರಿದ್ದರು.

ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಸ್‌ಎಂ ವೆಂಕಟೇಶ್ ನಾಯಕ್ ವಾರ್ಷಿಕ ವರದಿ ವಾಚಿಸಿದರು. ಆಡಳಿತ ಅಧಿಕಾರಿ ಅರುಣ್ ಡಿ ಸಿಲ್ವ ಸ್ವಾಗತಿಸಿದರು. ಧನಶ್ರೀ ಕುಡ್ವ ಪರಿಚಯ ಗೈದರು. ಉಪ ಪ್ರಾಂಶುಪಾಲೆ ಡಾ. ರಶ್ಮಿ ಅರಸ್ ವಂದಿಸಿದರು.

LEAVE A REPLY

Please enter your comment!
Please enter your name here