ಮೂಡುಬಿದಿರೆ ಲಯನ್ಸ್ ಪದಗ್ರಹಣ: ಸುವರ್ಣ ಮಹೋತ್ಸವದ ಅವಧಿಗೆ ಅಧ್ಯಕ್ಷರಾಗಿ ಶಿವಪ್ರಸಾದ್ ಹೆಗ್ಡೆ

0
79

ಮೂಡುಬಿದಿರೆ: ಮೂಡುಬಿದಿರೆ ಲಯನ್ಸ್ ಪದಗ್ರಹಣ ಅಧಿಕಾರಿಯಾಗಿ ಪೂರ್ವ ರಾಜ್ಯಪಾಲರಾದ ಲಯನ್ ವಸಂತ್ ಕುಮಾರ್ ಶೆಟ್ಟಿ ಅವರು ಪಂಚರತ್ನದಲ್ಲಿ ಜುಲೈ 2 ರಂದು ನಡೆದ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿದರು.

2025-26 ಸುವರ್ಣ ಮಹೋತ್ಸವದ ಅವಧಿಗೆ ಅಧ್ಯಕ್ಷರಾಗಿ ಶಿವಪ್ರಸಾದ್ ಹೆಗ್ಡೆ ಕಣಂಜಾರು ಅಧಿಕಾರವನ್ನು ಸ್ವೀಕರಿಸಿದರು. ಕಾರ್ಯದರ್ಶಿಗಳಾಗಿ ಲ. ಓಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿಗಳಾಗಿ ಲ. ಹರೀಶ್ ತಂತ್ರಿ ಅಧಿಕಾರವನ್ನು ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಬೋನವೆಂಚರ್ ಮೆನೇಜಸ್, ಪ್ರಾಂತ್ಯಾಧ್ಯಕ್ಷರಾದ ಲ. ಜಗದೀಶ್ಚಂದ್ರ ಡಿ.ಕೆ., ವಲಯಾಧ್ಯಕ್ಷರಾದ ಲ. ಜೋಸ್ಸಿ ಮೆನೇಜಸ್, ಲ. ಮೇಲ್ವಿನ್ ಸಲ್ದಾನ್ಹ, ಮಾಜಿ ಕಾರ್ಯದರ್ಶಿಗಳಾದ ವಿನೋದ್ ಡೇಸಾ ಕೋಶಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here