ಮೂಡುಬಿದರೆ: ತಾಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ ಸಮಾಜ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಫುಲ್ಲ ಎಂ ಶೆಟ್ಟಿ ಅವರು ಅಂಗೈಯಲ್ಲಿ ಆರೋಗ್ಯ ಎನ್ನುವ ವಿಷಯವಾಗಿ ಹಲವಾರು ಮಾಹಿತಿಗಳನ್ನು ನಿವೃತ್ತ ನೌಕರರೊಂದಿಗೆ ಹಂಚಿಕೊಂಡರು. ಈ ಮಾಹಿತಿಗಳಿಂದಾಗಿ ನಿವೃತ್ತರವೂ ಕೂಡ ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯ ಇದೆ ಎನ್ನುವ ಮಾತನ್ನು ಹಲವಾರು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ತುಕ್ರಪ್ಪ ಕೆಂಬಾರೆ, ನಿಕಟ ಪೂರ್ವ ಅಧ್ಯಕ್ಷ ರಾಜಾರಾಮ್, ಕಾರ್ಯದರ್ಶಿ ಎಲ್.ಜೆ. ಫೆರ್ನಾಂಡಿಸ್ ಹಾಜರಿದ್ದರು.
ವರದಿ ರಾಯಿ ರಾಜಕುಮಾರ

