ಮೂಡಬಿದಿರೆ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜ್ಯೋತಿ ನಗರ ಕ್ಲಸ್ಟರ್ ಪ್ರತಿಭಾ ಕಾರಂಜಿಯಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶಾಲಾ ಸಂಚಾಲಕರಾದ ಪ್ರವೀಣಚಂದ್ರ ಜೈನ್ ಹಾಗೂ ಮುಖ್ಯ ಶಿಕ್ಷಕಿಯಾದ ತಿಲಕಾ ಅನಂತವೀರ್ ಜೈನ್ ಇವರು ವಿಜಯಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಹಾಗೂ ವಿದ್ಯಾರ್ಥಿಗಳ ಗೆಲುವಿನ ಹಿಂದೆ ಶ್ರಮಿಸಿದ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು . ವಿದ್ಯಾರ್ಥಿಗಳಿಗೆ ಕಂಠಪಾಠ, ಚಿತ್ರಕಲೆ, ಗಜಲ್ , ಭಕ್ತಿಗೀತೆ, ಜಾನಪದ ಗೀತೆ, ಅಭಿನಯ ಗೀತೆ, ರಂಗೋಲಿ, ಕ್ಲೇ ಮಾಡೆಲಿಂಗ್, ಕಥೆ ಹೇಳುವುದು, ಭಾಷಣ , ಪ್ರಬಂಧ , ಚರ್ಚೆ, ಧಾರ್ಮಿಕ ಪಠಣ, ಮಿಮಿಕ್ರಿ, ಛದ್ಮವೇಷ ಮುಂತಾದ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿತ್ತು.

