ಮೂಡುಬಿದಿರೆ: ರಾಮಕ್ಷತ್ರೀಯ ಸೇವಾ ಸಂಘ(ರಿ.), ಮಹಿಳಾ ವೃಂದ, ಯುವ ವೃಂದ, ಭಜನಾ ವೃಂದ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆ

0
9

ಮೂಡುಬಿದಿರೆ: ರಾಮಕ್ಷತ್ರೀಯ ಸೇವಾ ಸಂಘ(ರಿ.), ಮಹಿಳಾ ವೃಂದ, ಯುವ ವೃಂದ, ಭಜನಾ ವೃಂದ ವತಿಯಿಂದ ಸತ್ಯನಾರಯಣ ಪೂಜೆ ಹಾಗೂ ವಾರ್ಷಿಕ ಮಹಾಸಭೆಯೂ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ 19-04-2026ರ ಭಾನುವಾರದಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸೇವಾ ಸಂಘ(ರಿ.) ಅಧ್ಯಕ್ಷರಾದ ಶ್ರೀ ಪ್ರೇಮಾನಂದ ಕೆ.ಎಸ್, ಪಣಂಬೂರು ಮಂಗಳೂರು ಉತ್ತರ ವಲಯದ ಎ.ಸಿ.ಪಿ ಶ್ರೀಕಾಂತ್ ಕೆ, ಶ್ರೀ ರಾಮ ಕ್ರೆಡಿಟ್ ಕೋ. ಸೊಸೈಟಿಯ ಅಧ್ಯಕ್ಷರಾದ ನಾಗರಾಜ ಕಾಮಧೇನು, ದಕ್ಷಿಣ ಕನ್ನಡ ಜಿಲ್ಲೆಯ ಜನಪದ ಪರಿಷತ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಭಾಗಿಯಾಗಿದ್ದರು.

ಸಮಾಜಮುಖಿ ಕಾರ್ಯಗಳಿಗೆ ಹಾಗೂ ಧಾರ್ಮಿಕ ಸಂಘಟನೆಗಳ ಸೇವೆಗಾಗಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆಯವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಆಶಕ್ತರಿಗೆ ಸಹಾಯ ಹಸ್ತದ ಮಾಡುವ ಕಾರ್ಯವನ್ನು ಮಾಡಲಾಯಿತು. ಸೂರ್ಯ ರಾವ್ ವರದಿ ವಾಚಿಸಿದರು. ಸಿಂಚನ, ಸ್ಪೂರ್ತಿ ಹಾಗೂ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಗಳು ನಡೆಯಿತು. ಕಾರ್ಯಕ್ರಮದಲ್ಲಿ ರಾಮಕ್ಷತ್ರೀಯ ಸೇವಾ ಸಂಘ(ರಿ.) ಸಮಿತಿಯ ವಿವಿಧ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here