ಮೂಡುಬಿದಿರೆ ತುಳುಕೂಟ; “ಆಟಿಡೊಂಜಿ ದಿನ ” ತುಳುವರ ಸಂಭ್ರಮ

0
118

ಮೂಡುಬಿದಿರೆ :-ತುಳುಕೂಟ (ರಿ.) ಬೆದ್ರ ಇದರ ಆಶ್ರಯದಲ್ಲಿ “ಆಟಿಡೊಂಜಿ ದಿನ” ತುಳುವರ ಸಂಭ್ರಮದ ಕಾರ್ಯಕ್ರಮವನ್ನು ಮೂಡುಬಿದರೆಯ ಸ್ಕೌಟ್ಸ್ ಮತ್ತು ಗೈಡ್ ಕನ್ನಡ ಭವನ ಇಲ್ಲಿ ಆಯೋಜಿಸಲಾಗಿತ್ತು.
ತುಳುವರ ಜೀವನಶೈಲಿಯ ವಿಶೇಷ ಕಾರ್ಯಕ್ರಮ ಇದಾಗಿದ್ದು, ತುಳುವರ ಆಟಿ ತಿಂಗಳ ಜೀವನಶೈಲಿಯನ್ನು, ಆಧುನಿಕ ಜೀವನಶೈಲಿಯ ಜನರಿಗೆ ಮರು ನೆನಪಿಸುವ ವಿಶೇಷ ಕಾರ್ಯಕ್ರಮವಾಗಿದ್ದು ಇದನ್ನು ಆಟಿಡೊಂಜಿ ದಿನ ಎಂಬ ಹೆಸರಿನಿಂದ ತುಳು ನಾಡಿನಲ್ಲಿ ನೆಲೆಸಿರುವ ತುಳು ಬಾಷಿಗರು ಹಾಗೂ ರಾಜ್ಯ,ರಾಷ್ಟ್ರ,ವಿಶ್ವದಾದ್ಯಂತ ನೆಲೆಸಿರುವ ತುಳುವರು ಬಹು ಶ್ರದ್ಧೆಯಿಂದ ಆಚರಿಸುತ್ತಿದ್ದು, ತುಳುವ ಜೀವನ ಶೈಲಿ, ತುಳುವರ ಪ್ರಾಚೀನ ಆಹಾರ ಪದ್ಧತಿ, ಸಾಂಸ್ಕೃತಿಕ ಪ್ರಭುದ್ಧತೆ, ಶ್ರೀಮಂತ ತುಳುವ ಭಾಷೆಯ ಅನಾವರಣ ಹೀಗೆ ಸಮಗ್ರ ತುಳುವ ಜೀವನ ಶೈಲಿಯ ಆಚರಣೆ ಪ್ರತಿನಿಧಿಸುತ್ತಿರುವುದು “ಆಡಿಡೊಂಜಿ ದಿನ” ಕಾರ್ಯಕ್ರಮದ ವಿಶೇಷವಾಗಿದೆ.
ಮೂಡುಬಿದಿರೆಯ ಸೌಟ್ಸ್ – ಗೈಡ್ಸ್ ಕನ್ನಡ ಭವನ, ಸ್ವರಾಜ್ಯ ಮೈದಾನ ಹತ್ತಿರ ಮೂಡುಬಿದಿರೆ ಇಲ್ಲಿ ತುಳು ಕೂಟ ಬೆದ್ರ ಇದರ ಆಶ್ರಯದಲ್ಲಿ ಧನಕೀರ್ತಿ ಬಲಿಪ ಅಧ್ಯಕ್ಷತೆಯಲ್ಲಿ ವಿಶೇಷ ಆಮಂತ್ರಿತರಾದ ಮುನಿರಾಜ ರೆಂಜಾಳ ಇವರ ಉಪಸ್ಥಿತಿಯಲ್ಲಿ ತುಳು ಪದರಂಗಿತ, ನೃತ್ಯ ಕಾರ್ಯಕ್ರಮ, ತುಳು ಜಾನಪದ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮ ಮತ್ತು ಭಕ್ಷ -ಭೋಜನಗಳು ಏರ್ಪಡಿಸಲಾಗಿತ್ತು ಹಾಗೂ ವಾಯ್ಸ್ ಆಫ್ ಆರಾಧನಾ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತುಳು ಕೂಟ ಬೆದ್ರ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಪತ್ರಿಕೆಗೆ ಮಾಹಿತಿಯನ್ನು ನೀಡಿದ್ದಾರೆ ಕಾರ್ಯಕ್ರಮದಲ್ಲಿ ಸುಭಾಶ್ಚಂದ್ರ ಚೌಟ, ಧನಕೀರ್ತಿ ಬಲಿಪ, ವೇಣುಗೋಪಾಲ ಶೆಟ್ಟಿ, ಚೇತನ ಆರ್ ಹೆಗ್ಡೆ, ಪದ್ಮಶ್ರೀ ಭಟ್, ತುಳುನಾಡು ವಾರ್ತೆ ಪುನೀತ್, ಬಾಹುಬಲಿ ಪ್ರಸಾದ್, ಜಯಂತಿ ಬಂಗೇರ, ಸದಾನಂದ ನಾರಾವಿ ಸಹಿತ ವಾಯ್ಸ್ ಆಫ್ ಆರಾಧನಾ ತಂಡದ ಸದಸ್ಯರು, ತುಳು ಕೂಟ ಬೆದ್ರ ಸದಸ್ಯರು, ಹಾಗೂ ಆಮಂತ್ರಿತರು ಉಪಸ್ಥಿತರಿದ್ದರು.

ವರದಿ:- ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here