ಮೂಡುಬಿದಿರೆ: ಮೂಡುಬಿದಿರೆಯ ಐತಿಹಾಸಿಕ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೯ ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ನೇತೃತ್ವದಲ್ಲಿ ನಡೆಯುವ ಕೃಷ್ಣೋತ್ಸವ-೨೦೨೫ ಪ್ರಯುಕ್ತ ನಡೆಸುವ ‘ಅಷ್ಟಮಿದ ಗೊಬ್ಬು’ ಎನ್ನುವ ಸಾಂಪ್ರದಾಯಿಕ ಕ್ರೀಡಾಕೂಟ ಭಾನುವಾರ ಮೂಡುಬಿದಿರೆ ತಾಲೂಕು ಆಫೀಸ್ ಮುಂಭಾಗದಲ್ಲಿ ನಡೆಯಿತು.
‘ಅಷ್ಟಮಿದ ಗೊಬ್ಬು’ ಕ್ರೀಡಾಕೂಟ ಕಾರ್ಯಕ್ರಮದ ಉದ್ಘಾಟಕರಾಗಿ ವಿವೇಕ ಆಳ್ವ ಭಾಗವಹಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ವಿವೇಕ ಆಳ್ವ ಅವರು, ಜವನೇರ ಬೆದ್ರ ಸಂಘಟನೆ ಮೂಡುಬಿದರೆಯ ಮಾದರಿ ಸಂಘಟನೆ. ಸ್ವಚ್ಛತೆ, ಪರಿಸರ ಪ್ರೇಮ, ರಕ್ತದಾನ ಕಾರ್ಯಕ್ರಮವನ್ನು ಶ್ಲಾಘಿಸಿದರು.
‘ಅಷ್ಟಮಿದ ಗೊಬ್ಬು’ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಕುಮಾರ್ ಎಲೆಕ್ಟ್ರಿಕಲ್ಸ್ ನ ಕುಮಾರ್ ಪೂಜಾರಿ, ಮಾಡರ್ನ್ ಕನ್ಸ್ಟ್ರಕ್ಷನ್ ಮಾಲಕರಾದ ಜಾವೇದ್ ಶೇಕ್, ಉದ್ಯಮಿಗಳಾದ ಗಂಗಾಧರ್ ಶೆಟ್ಟಿ, ರವಿ ಪೂಜಾರಿ, ಮುರುಳಿಧರ್ ಕೋಟ್ಯಾನ್, ಪ್ರೊಫೆಸರ್ ಡಾ| ಶಾಮ್ ಪ್ರಸಾದ್, ರಾಜೇಶ್ ಕೋಟೆಕಾರ್, ನಿವೃತ ಶಿಕ್ಷಕಿ ಪ್ರೇಮ ರಾವ್ ಹಾಗೂ ಇನ್ನಿತರರು ಅತಿಥಿಗಳಾಗಿ ಭಾಗವಹಿಸಿದರು.
ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರರಾಗಿ ಆಯ್ಕೆಯಾದ ಸಂಘಟನೆಯ ಕ್ರೀಡಾ ಕಾರ್ಯದರ್ಶಿ ಭಾಸ್ಕರ್ ಪಾಲಡ್ಕ ಅವರನ್ನು ಇದೇ ಸಂಧರ್ಭದಲ್ಲಿ ಗೌರವಿಸಲಾಯಿತು. ಅಷ್ಟಮಿಯ ಸಾಂಪ್ರದಾಯಿಕ ಕ್ರೀಡೆಗಳಾದ ತಪ್ಪಂಗೈ, ಲಗೋರಿ, ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವುದು ಹಾಗೂ ಮಾನವ ಗೋಪುರ ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಏರ್ಪಡಿಸಲಾಗಿತ್ತು. ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ಕಾರ್ಯದರ್ಶಿ ದಿನೇಶ್ ಕುಮಾರ್, ಯುವ ಸಂಘಟನೆಯ ಸಂಚಾಲಕರಾದ ನಾರಾಯಣ ಪದುಮಲೆ, ಟ್ರಸ್ಟೀ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್, ರಕ್ತ ನಿಧಿ ಸಂಚಾಲಕ ಮನು ಒಂಟಿ ಕಟ್ಟೆ, ಬಕುತಿ ಸಂಚಾಲಕ ಪ್ರಥಮ್ ಹಾಗೂ ಸಂಘಟನೆಯ ಸದಸ್ಯರು ಭಾಗವಹಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಕೆಲಪುತ್ತಿಗೆ ಹಾಗೂ ಗುರುಪ್ರಸಾದ್ ಬಿ ಪೂಜಾರಿ ನಡೆಸಿಕೊಟ್ಟರು.

