ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಕು.ಅದ್ವಿಕಾ ರವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ.
ಕಣಿಯೂರು: ಜು 30. ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಪದ್ಮುಂಜ ಜನೌಷಧಿ ಕೇಂದ್ರದ ಮಾಲಕರಾದ ಶ್ರೀಮತಿ ಶಾಂಭವಿ ಮತ್ತು ವಿಜಯ್ ದಂಪತಿಗಳ ಸುಪುತ್ರಿ ಕು.ಅದ್ವಿಕಾ ರವರ 3ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಲನ ಕೇಂದ್ರದ ವಿದ್ಯಾರ್ಥಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

