ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ

0
5



ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದಿಂದ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕನ್ನಡದ ಹಿರಿಯ ವಿದ್ವಾಂಸರಿಗೆ ಮತ್ತು ಸಂಸ್ಕೃತಿಯಲ್ಲಿ ಕೆಲಸ ಮಾಡಿದ ಪ್ರತಿಭಾವಂತರಿಗೆ, ಸಂಸ್ಥೆಗಳಿಗೆ ಪ್ರತಿ ವರ್ಷ ನೀಡುತ್ತಿರುವ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಈ ವರ್ಷವೂ ನೀಡಲಾಗುತ್ತಿದೆ. ಈ ವರ್ಷದ ಶಿವರಾಮ ಕಾರಂತ ಪ್ರಶಸ್ತಿಯನ್ನು ಪಡೆಯುತ್ತಿರುವವರು ಬಹುಮುಖಿ ವಿದ್ವಾಂಸರಾದ ಡಾ. ತಾಳ್ತಜೆ ವಸಂತ ಕುಮಾರ್ ಮತ್ತು ನಾಟಕಕಾರ, ದೂರದರ್ಶನ ಭಾಷೆಯನ್ನು ವೈಚಾರಿಕ ಮಾಧ್ಯಮವಾಗಿ ಮಾಡಿ ಕರ್ನಾಟಕದ ಮನೆಮನೆಗೆ ತಲುಪಿಸಿದ ಟಿಎನ್ ಸೀತಾರಾಮ್ ಅವರಿಗೆ ನೀಡಲು ತೀರ್ಮಾನಿಸಿದೆ. ಅದೇ ರೀತಿ ನಾಡು ನುಡಿಗಾಗಿ ನಿಸ್ವಾರ್ಥತೆಯಿಂದ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಯ ಪರಿಚಾರಿಕೆ ಮಾಡುತ್ತಾ ಬಂದಿರುವ ಮೂಡುಬಿದಿರೆ ಸಮಾಜ ಮಂದಿರ ಸಭಾ ಸಂಸ್ಥೆಗೆ ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಜಯಪ್ರಕಾಶ್ ಮಾವಿನಕುಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೇಷ್ಠ ಕೃತಿಗಳಿಗೆ ನೀಡಲಾಗುತ್ತಿರುವ ಶ್ರೀರಾಮ ಕೊರಂಟೈನ್ ಪುರಸ್ಕಾರಕ್ಕಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. ಅಂತಹ ಕೃತಿಗಳಲ್ಲಿ ಹಳೆಮನೆ ರಾಜಶೇಖರ ಅವರ ಸೂರ್ಯಜಲ, ಡಾ ಕೆ ಎಸ್ ಚೈತ್ರ ಅವರ ದಂತ ಕಥೆಗಳು, ಡಾ ಕಾವ್ಯ ಶ್ರೀನಿವಾಸ ಮೂರ್ತಿ ಅವರ ಕನ್ನಡ ಚಿಂತನ ಕೃತಿಗಳಿಗೆ ಆಯ್ಕೆ ಸಮಿತಿಯು ತೀರ್ಮಾನಿಸಿದಂತೆ ಶಿವರಾಮ ಕಾರಂತ ಪುರಸ್ಕಾರವನ್ನು ನೀಡಲು ಪ್ರತಿಷ್ಠಾನ ತೀರ್ಮಾನಿಸಿದೆ. ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಕೆ ಶ್ರೀಪತಿ ಭಟ್ ಸ್ವಾಗತಿಸಿದರು. ಸದಸ್ಯ ರಾಜಾರಾಮ ವಂದಿಸಿದರು.

ವರದಿ ರಾಯಿ ರಾಜ ಕುಮಾರ್