ಉಡುಪಿ : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ICAI)ಯ MSME ಹಾಗೂ ಸ್ಟಾರ್ಟ್‌ಅಪ್ ಸಮಿತಿಯ ಆಶ್ರಯದಲ್ಲಿ, ಐಸಿಎಐ ಉಡುಪಿ ಶಾಖೆ (SIRC) ವತಿಯಿಂದ , 2026ರಂದು ಮಧ್ಯಾಹ್ನ 3.30 ಗಂಟೆಗೆ ಕುಂಜಿಬೆಟ್ಟುವಿನ ಐಸಿಎಐ ಭವನದಲ್ಲಿ ICAI MSME ಮಹೋತ್ಸವ–2026 ಕಾರ್ಯಕ್ರಮ ಆಯೋಜಿಸಲಾಗಿದೆ.
MSME ಉದ್ಯಮಿಗಳು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ವ್ಯಾಪಾರಿಗಳು ಹಾಗೂ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದ್ದು, MSMEಗಳಲ್ಲಿ ಗಮನಿಸ ಬೇಕಾದ ಅಂಶಗಳು, ದಂಡನೆಗಳು, ಸರ್ಕಾರಿ ಯೋಜನೆಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಲಹಾ ಸೇವೆಗಳ ಮೂಲಕ ಉದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ.
ಆಸಕ್ತ MSME ಉದ್ಯಮಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಸಿಎ ಎಂ. ರಾಘವೇಂದ್ರ ಮೊಗೆರಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

