ವಿಶ್ವ ಮಾದಕ ದ್ರವ್ಯ ದುರುಪಯೋಗ ಮತ್ತು ಕಳ್ಳಸಾಗಣೆ ವಿರೋಧಿ ದಿನದ ; ಜನಜಾಗೃತಿ ಮೂಡಿಸಲು ಕಿರುಚಿತ್ರಬಿಡುಗಡೆ

0
36

ಉಡುಪಿ : ಜೂನ್ 26ರಂದು ವಿಶ್ವ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು (International Day Against Drug Abuse & Illicit trafficking) ಆಚರಿಸಲಾಗುತ್ತದೆ. ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಸರಕಾರದ ವತಿಯಿಂದ ನಶಾ ಮುಕ್ತ ಭಾರತ್ ಅಭಿಯಾನ, ಸಾಮೂಹಿಕ ಜಾಗೃತಿ ಮತ್ತು ಪ್ರತಿಜ್ಞೆ, ಪುನರ್ವಸತಿ ಕೇಂದ್ರಗಳು ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ.

ಸಾಮಾಜಿಕ ಜಾಗೃತಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೋಲೀಸ್ ವತಿಯಿಂದ ಕಿರುಚಿತ್ರವನ್ನು ಪ್ರಚಾರ ಪಡಿಸಲು Illusionox Studio ಸಿದ್ಧಪಡಿಸಲಾಗಿದ್ದು, ಅಂತರಾಷ್ಟ್ರೀಯ ಭಾರತೀಯ ಮೂಲದ ಸೇವಾ ಸಂಸ್ಥೆಯಾದ ಜಯಂಟ್ಸ್ ಗ್ರೂಪ್ ಉಡುಪಿ ಇದರ ಸಹಭಾಗಿತ್ವದಲ್ಲಿ ಈ ವೀಡಿಯೋವನ್ನು ಲೋಕಾರ್ಪಣೆ ಮಾಡಲು ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಇವರಿಗೆ ಹಸ್ತಾಂತರಿಸಲಾಯಿತು.

ಜಯಂಟ್ಸ್ ಗ್ರೂಪಿನ ಅಧ್ಯಕ್ಷರಾದ ವಿನಯ್ ಪೂಜಾರಿ, ಕಾರ್ಯದರ್ಶಿ ‘ದಿವಾಕರ ಪೂಜಾರಿ ಮತ್ತು ಮಾಜಿ ಅಧ್ಯಕ್ಷರಾದ ಬಿ. ಚಿದಾನಂದ ಪೈ, ವಿಡಿಯೋ ನಿರ್ಮಾಣ ಮಾಡಿದ Illusionox Studio ಇದರ ಪ್ರವರ್ತಕರಾದ ಬಿ.ಸಚಿನ್ ಪೈ ಅಶ್ವಿನ್ ಆರ್. ರಾವ್ ಮತ್ತು ಜಯಂಟ್ಸ್ ಗ್ರೂಪ್ ಉಡುಪಿಯ ಪಧಾದಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು. ವಿಡಿಯೋವನ್ನು ವೀಕ್ಷಿಸಿ, ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದಿಸಿದ ಪೋಲೀಸ್ ವರಿಷ್ಠಾಧಿಕಾರಿಯವರು ಜಿಲ್ಲಾ ಪೋಲೀಸ್ ವೆಬ್‌ಸೈಟಿನಲ್ಲಿ ಈ ವೀಡಿಯೋ ಪ್ರದರ್ಶಿಸುವರೆ ಭರವಸೆಯನ್ನಿತ್ತರು.

LEAVE A REPLY

Please enter your comment!
Please enter your name here