ಜುಲೈ 17ರಂದು “ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕ ಬಿಡುಗಡೆ ಸಮಾರಂಭ

0
3

ಮಂಗಳೂರು: ಆರೋಗ್ಯಕರಜೀವನಶೈಲಿ ಹಾಗೂ ಯೋಗದ ಮಹತ್ವವನ್ನು ಸಮಾಜದಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ “ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕ ಬಿಡುಗಡೆ ಸಮಾರಂಭವುಜುಲೈ 17, 2026 (ಶುಕ್ರವಾರ) ಸಂಜೆ 4.00 ರಿಂದ 5.30 ಗಂಟೆಯವರೆಗೆ ಮಂಗಳೂರಿನ ರಾಮಕೃಷ್ಣ ಮಠದಅಮೃತ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ “ಆರೋಗ್ಯಕ್ಕಾಗಿ ಮುದ್ರೆಗಳು” ಪುಸ್ತಕವನ್ನುರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿಅವರುಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಅಧ್ಯಕ್ಷತೆಯನ್ನುಡಾ. ಜೀವರಾಜ್ ಸೊರಕೆ, ಎಮ್. ಎಸ್‌ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು, ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿಯೋಗಗುರು ಹಾಗೂ ಪುಸ್ತಕದ ಲೇಖಕರಾದಯೋಗರತ್ನಗೋಪಾಲಕೃಷ್ಣದೇಲಂಪಾಡಿಅವರುಯೋಗ, ಮುದ್ರೆಗಳು ಹಾಗೂ ಆರೋಗ್ಯಕರಜೀವನಶೈಲಿಯಕುರಿತು ವಿಶೇಷಉಪನ್ಯಾಸ ನೀಡಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಡಾ. ಸುರೇಶ್‌ದೇಲಂಪಾಡಿ, ಪ್ರೊಫೆಸರ್, ಆರ್.ಎನ್.ಎಸ್. ತಾಂತ್ರಿಕ ವಿದ್ಯಾಲಯ, ಬೆಂಗಳೂರು ಹಾಗೂ ಶ್ರೀ ಪ್ರಸನ್ನ ಕೆ., ಮಾಲಕರು, ಮಧುಬನ್ ಗ್ರಾಫಿಕ್ಸ್ಮಂಗಳೂರು ಉಪಸ್ಥಿತರಿರುವರು.
ಇಂದಿನ ಒತ್ತಡದ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಮುದ್ರೆಗಳ ಮಹತ್ವವನ್ನುಜನರಿಗೆ ಪರಿಚಯಿಸುವಉದ್ದೇಶದಿಂದ ಈ ಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಆಸಕ್ತ ಸಾರ್ವಜನಿಕರು, ಯೋಗಾಭ್ಯಾಸಿಗಳು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವಎಲ್ಲರೂಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆಪ್ರಕಟಣೆಯಲ್ಲಿ ತಿಳಿಸಿದೆ.