ಮುಲ್ಕಿ : “ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರ ಸಂಕಿರಣ

0
2

ಮುಲ್ಕಿ : ತುಳು ವರ್ಲ್ಡ್ ಫೌಂಡೇಶನ್, ತುಳುವ ಮಹಾಸಭೆ, ಇಂಟರ್ನ್ಯಾಷನಲ್, ಮುಲ್ಕಿ ಬಂಟರ ಸಂಘದ ನೇತೃತ್ವದಲ್ಲಿ ಮುಲ್ಕಿ ಬಿಲ್ಲವ ಸಂಘ ಮಹಿಳಾ ಮಂಡಳಿ, ರೋಟರಿ ಕ್ಲಬ್ , ಲಯನ್ ಕ್ಲಬ್ ಹಾಗೂ ವಿಜಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರ ಸಂಕಿರಣವು ಭಾನುವಾರ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆಯಿತು.

ತುಳು ವಿಚಾರ ಸಂಕಿರಣದ ಉದ್ಘಾಟನೆಯನ್ನು ಒಡಿಯೂರು ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ನೆರವೇರಿಸಿ ಮಾತನಾಡಿ ತುಳುವಿನಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಇದೆ ತುಳು ಹೆಮ್ಮೆಯ ಭಾಷೆಯಾಗಿದ್ದು ರಾಜ್ಯದಲ್ಲಿ ತುಳುವಿಗೆ ವಿಶೇಷ ಸ್ಥಾನಮಾನವಿದೆ, ಕಾರ್ಯಕ್ರಮಗಳ ಸಂಘಟನೆಯ ಮೂಲಕ ತುಳುನಾಡಿನ ತಾಯಿಯನ್ನು ನೆನಪಿಸಿಕೊಳ್ಳುವ ಕಾರ್ಯ ಅಭಿನಂದನೀಯ, ತುಳು ಭಾಷೆಯು 8ನೇ ಪರಿಚ್ಛೇದ ಸೇರಲಿ ತುಳುವಪ್ಪೆ ಯ ಈ ನೆಲ ವಿಶ್ವದಲ್ಲಿ ಮೇಳೈಸಲಿ ಎಂದು ಶುಭ ಹಾರೈಸಿದರು.

ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ ತುಳುನಾಡಿನ ಮೂಲ ಸಂಸ್ಕೃತಿ ಆಚಾರ ವಿಚಾರ ದೈವ ಪರಂಪರೆ ಹಾಗೂ ತುಳು ಜೀವನ ಮೌಲ್ಯಗಳ ಸಂರಕ್ಷಣೆ ಮತ್ತು ಅದರ ಮಹತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಹಾಗೂ ತುಳು ಜಾನಪದ ವಿದ್ವಾಂಸೆಯಾದ ಡಾ. ಇಂದಿರಾ ಹೆಗ್ಗಡೆ ವಹಿಸಿ ಮಾತನಾಡಿದರು. ತುಳು ಜನಪದ ವಿದ್ವಾಂಸ ಪ್ರೊ. ಪುರುಷೋತ್ತಮೆ ಬಲ್ಯಾಯ ದಿಕ್ಸೂಚಿ ಭಾಷಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜೀ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಮಾಜೀ ಶಾಸಕಿ ಶಕುಂತಲಾ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತ ಪಳ್ಳಿ ಹಾಗೂ ಕಾರ್ನಾಡ್ ಸರಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ನಿರ್ದೇಶಕ ರಾಜೇಶ್ ಆಳ್ವ ಬದಿಯಡ್ಕ, ತುಳುವ ಮಹಾಸಭೆ ಪ್ರಧಾನ ಸಂಚಾಲಕ ಅರವಿಂದ ಬೆಲ್ಚಡ, ಸಮಿತಿಯ ಸರೋಜಿನಿ ಸುವರ್ಣ, ಗೀತಾ ಗಣೇಶ್ ಬಂಗೇರ, ಲತಾ ಶೇಖರ್ ಪೂಜಾರಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಸುನಿಲ್ ಆಳ್ವ ಸ್ವಾಗತಿಸಿದರು, ನವೀನ್ ಶೆಟ್ಟಿ ಎಡ್ಮೆ ಮಾರ್ ನಿರೂಪಿಸಿದರು.

“ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಠಿಗಳು ಮೇಳೈಸಿದವು ,”ಅಪ್ಪೆಕಟ್ಟು ತುಳುವ ಸಂಸ್ಕೃತಿಯ ಬೇರು” ಗೋಷ್ಠಿಯನ್ನು ಡಾ. ಸಾಯಿಗೀತಾ ಹೆಗ್ಡೆ ಸಂಯೋಜಿಸಿದರು.

ಅಮೃತ ಅಜಯ್ ಶೆಟ್ಟಿ, ಡಾ. ಜ್ಯೋತಿ ಚೇಳಾಯರು, ಡಾ. ರತಿ ಕೋಡಿಕಲ್, ಶ್ರೀಕಾಂತ್ ಶೆಟ್ಟಿ ಹಾಗೂ ಅರವಿಂದ ಬೆ ಳ್ಚಡ ವಿಚಾರ ಮಂಡನೆ ಮಾಡಿದರು
“ಬರಿ ಬಂದ್ರ ಕಾಪುನ ತುಳುವ ಕುಟುಮೊದ ಇತ್ಯಾತ್ಮಕ ಸಾಧಿ” ಗೋಷ್ಠಿಯನ್ನು ಡಾ. ವೈ.ಎನ್. ಶೆಟ್ಟಿ ಸಂಯೋಜಿಸಿದರು ಸಾಯಿನಾಥ್ ಶೆಟ್ಟಿ, ಅರ್ಪಿತಾ ಪ್ರಶಾಂತ್ ಶೆಟ್ಟಿ, ರೇಮಂಡ್ ಡಿ ಕುನ್ಹಾ ತಾಕೊಡೆ, ದಾ.ನಾ. ಉಮ್ಮಣ್ಣ ಹಾಗೂ ವಿದ್ಯಾಶ್ರೀ ಎಸ್ ಉಪನ್ಯಾಸ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಐಲೇಸ ಬೆಂಗಳೂರು ತಂಡದಿಂದ ಪದ ಪಾಡ್ದನ , ಬೊಳಿಕೆ ಜಾನಪದ ಕೂಟ ತಂಡದಿಂದ ಪಾಡ್ದನ ಮೇಳ, ವಿಜಯ ಕಾಲೇಜು ಮುಲ್ಕಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ “ಅಪ್ಪೆ ಬೇರ್” ಮೂಲ ಸಂಸ್ಕೃತಿಯ ನಲಿಕೆ ಮತ್ತು ತೂಪರಿಕೆ, ಹಾಗೂ ಬಿಲ್ಲವ ಸಂಘ ಮಹಿಳಾ ಮಂಡಳಿ ಸದಸ್ಯೆಯರಿಂದ “ಬೆನ್ನಿ ಬದುಕು ‘ ನಲಿಕೆ ನಡೆಯಿತು.

LEAVE A REPLY

Please enter your comment!
Please enter your name here