ಮುಲ್ಕಿ: ತಾಲೂಕು ಆಡಳಿತ ಪ್ರಜಾ ಸೌಧ ಅವ್ಯವಸ್ಥೆಗಳ ಆಗರ-ಶಾಸಕರಿಗೆ ದೂರು

0
29

ಮುಲ್ಕಿ : ಕಳೆದ ತಿಂಗಳುಗಳ ಹಿಂದೆ ಉದ್ಘಾಟನೆಗೊಂಡ ಬಹು ಕೋಟಿ ವೆಚ್ಚದ ಮುಲ್ಕಿ ತಾಲೂಕು ಆಡಳಿತ ಪ್ರಜಾ ಸೌಧ ಅವ್ಯವಸ್ಥೆಗಳ ಆಗರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿರಂಜನ್ ಹರಿಪಾದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ ನೂತನ ಪ್ರಜಾಸೌಧ ಮುಲ್ಕಿ ತಾಲೂಕು ಆಡಳಿತ ಕೇಂದ್ರ ಕೇವಲ ಹೆಸರಿಗೆ ಮಾತ್ರ ಕಾಟಚಾರದ ಕಟ್ಟಡವಾಗಿದ್ದು ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ ಕಟ್ಟಡ ಒಳಗಿನ ಪರಿಸ್ಥಿತಿಯನ್ನು ಕೇಳುವ ಗತಿ ಇಲ್ಲದಂತಾಗಿದೆ.
ನೂತನ ಆಡಳಿತ ಸೌಧದಲ್ಲಿ ಕಳೆದ ತಿಂಗಳಿನಿಂದ ಸರ್ವರ್ ಸಮಸ್ಯೆ ಎದ್ದು ಕಾಣುತ್ತಿದ್ದು ತಾಲೂಕು ಆಡಳಿತ ಸೌಧಕ್ಕೆ ಬಂದ ಕೆಲಸಕ್ಕೆಂದು ಬರುವ ಗ್ರಾಮಸ್ಥರು ತಮ್ಮ ಕೆಲಸವಾಗದೆ ಸುಸ್ತಾಗಿ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕಿ ತೆರಳುತ್ತಿದ್ದಾರೆ.
ಒಂದು ಕಡೆ ಸರ್ವರ್ ಸಮಸ್ಯೆಯಾದರೆ ಇನ್ನೊಂದು ಕಡೆ ಯಾವುದೇ ಅರ್ಜಿ ಸ್ವೀಕೃತಿ ತೆಗೆದುಕೊಳ್ಳಲು ಸಾಧ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಮೂಕ ಪ್ರೇಕ್ಷರಂತೆ ತಾಲೂಕಿಗೆ ಬಂದ ಸಾರ್ವಜನಿಕರನ್ನು ವಾಪಸ್ ಕಳಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ವಿದ್ಯುತ್ ಇಲ್ಲದಿದ್ದರೆ ಕೆಲಸ ಇಲ್ಲ!!
ನಿರಂಜನ್ ಬಂಗೇರ ಮಾತನಾಡಿ ತಾಲೂಕು ವ್ಯಾಪ್ತಿಯಲ್ಲಿ ಪ್ರತೀ ಗುರುವಾರ ದಿನ ಹೆಚ್ಚಾಗಿ ಮುಲ್ಕಿ ಪರಿಸರದಲ್ಲಿ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು ಬೆಳಗ್ಗಿನಿಂದ ಸಂಜೆವರೆಗೆ ವಿದ್ಯುತ್ ಕಡಿತಗೊಳ್ಳುತ್ತಿದೆ, ಈ ಸಂದರ್ಭ ತಾಲೂಕು ಆಡಳಿತ ಸೌಧದಲ್ಲಿ ಯಾವುದೇ ಅರ್ಜಿ,ಆರ್ ಟಿ ಸಿ,ಇನ್ನಿತರ ದಾಖಲೆ ಪತ್ರ ತೆಗೆದುಕೊಳ್ಳುಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ
ನೂತನ ಕಟ್ಟಡದಲ್ಲಿ ಇನ್ವರ್ಟರ್ ಇದ್ದರೂ ನಿರ್ವಹಣೆ ಮಾಡಿದ ಇಂಜಿನಿಯರ್ ಎಡವಟ್ಟು ಇಡೀ ಕಟ್ಟಡ ಕತ್ತಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಸ್ಥಿತಿ .ಉಂಟಾಗಿದೆ ಎಂದು ಅವರ ಆಕ್ರೋಶ ವ್ಯಕ್ತಪಡಿಸಿ ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ದೂರು ನೀಡಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ಆಗುತ್ತಿರುವ ತೊಂದರೆಗೆ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದಾರೆ.
ಶಾಸಕರ ದಿಢೀರ್ ಭೇಟಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸೂಚನೆ
ನೂತನ ಆಡಳಿತ ಸೌದದಲ್ಲಿ ಅವ್ಯವಸ್ಥೆಗಳ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ದಿಡೀರ್ ಪ್ರಜಾ ಸೌಧಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಅವ್ಯವಸ್ಥೆಗಳು ಗಮನಕ್ಕೆ ಬಂದಿದೆ ಕೂಡಲೇ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here