ಮುಲ್ಕಿ:ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತವಾಗಿ ಮನೆಯೊಳಗೆ ನೀರು ನುಗ್ಗಿದ್ದು , ಇನ್ನೂ ಕೆಲವೆಡೆ ಗದ್ದೆಗೆ ನೀರು ನುಗ್ಗಿ ಅಪಾರ ಕೃಷಿ ಹಾನಿ ಸಂಭವಿಸಿದೆ
ಬಾರೀ ಮಳೆಗೆ ಬಪ್ಪನಾಡು-ಏಳಿಂಜೆ ಲೋಕೋಪಯೋಗಿ ರಸ್ತೆಯ ಕೊಲಕಾಡಿ ಬಳಿ ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಯಿತು.
ಕೂಡಲೇ ಸ್ಥಳೀಯರಾದ ಮಾಧವ ಪೂಜಾರಿ, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮನೋಹರ ಕೋಟ್ಯಾನ್ , ಮುಲ್ಕಿ ನಪಂ ಮಾಜಿ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಧಾವಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.
ಈ ಭಾಗದಲ್ಲಿ ಮಾಧವ ಪೂಜಾರಿ, ರಾಜೇಶ್ ಭಟ್, ಕಮಲ, ಗಂಗಾಧರ ಶೆಟ್ಟಿ ಬರ್ಕೆ ತೋಟ ಮತ್ತಿತರದ ಮನೆಗೆ ಹಾಗೂ ಗದ್ದೆಗೆ ನೀರು ನುಗ್ಗಿದ್ದು ಅಪಾರ ಕೃಷಿ ಹಾನಿ ಸಂಭವಿಸಿದೆ.
ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ದೇವಸ್ಥಾನದ ಒಳಗಡೆ ನೀರು ನುಗ್ಗಿ ಭಕ್ತಾದಿಗಳಿಗೆ ತೀವ್ರ ತೊಂದರೆ ಆಯಿತು,ಮುಲ್ಕಿನಗರ ಪಂಚಾಯತ್ ವ್ಯಾಪ್ತಿಯ ಮಾನಂಪಾಡಿ ಘಜನಿ, ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರು, ಕಕ್ವ, ಕುಮಾರಮಂಗಿಲ ದೇವಸ್ಥಾನದ ಪರಿಸರದಲ್ಲಿ ಭಾರಿ ಪ್ರಮಾಣದಲ್ಲಿ ನೆರೆ ನೀರು ಬಂದಿದ್ದು ಕೃತಕ ನೆರೆ ಉಂಟಾಗಿ ರಸ್ತೆ ಸಂಚಾರ ಸಂಚಾರಕ್ಕೆ ತೊಂದರೆ,ಹಾಗೂ ಕೃಷಿ ಹಾನಿ ಸಂಭವಿಸಿದೆ
ಸ್ಥಳಕ್ಕೆ ಮುಲ್ಕಿ ತಹಶೀಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

