ಮುಲ್ಕಿ: ಮರಳುಗಾರಿಕೆ ವಾಹನಗಳಿಂದ ಗ್ರಾಮೀಣ ಭಾಗದ ರಸ್ತೆ ರಸ್ತೆ ಉಡೀಸ್-ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಂತಿ ಸಮಿತಿ ಸಭೆಯಲ್ಲಿ ಒತ್ತಾಯ

0
265

ಮುಲ್ಕಿ: ಪೊಲೀಸ್ ಠಾಣೆಯಲ್ಲಿ ನೂತನ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ರಾಜಕೀಯ ಪಕ್ಷಗಳ ನಾಯಕರ ಹಾಗೂ ಗಣ್ಯ ವ್ಯಕ್ತಿಗಳ ಶಾಂತಿ ಸಮಿತಿ ಸಭೆ ನಡೆಯಿತು
ಸಭೆಯಲ್ಲಿ ನಾಗರಿಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮಾತನಾಡಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಗ್ರಾಮೀಣ ಭಾಗದ ರಸ್ತೆಗಳು ವಿನಾಶದ ಅಂಚಿನಲ್ಲಿದೆ
ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಿಂದ ಬರುವ ಮರಳು ಲಾರಿಗಳು ಹೆದ್ದಾರಿ ಟೋಲ್ ತಪ್ಪಿಸಿ ವಿಜಯಾ ಕಾಲೇಜು ರಸ್ತೆಯಿಂದ ಮಟ್ಟು ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸುತ್ತಿದ್ದು ಭಾರವಾದ ವಾಹನಗಳಿಂದ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟು ವಿನಾಶದ ಅಂಚಿನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಬಗ್ಗೆ ಅನೇಕ ಬಾರಿ ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಈ ಬಗ್ಗೆ ಮುಲ್ಕಿ ಎಸ್ಐ ಅನಿತಾ ಮಾತನಾಡಿ ರಾಜಕೀಯ ದೂರವಿಟ್ಟರೆ ಕ್ರಮ ಕೈಗೊಳ್ಳಲು ಬದ್ಧವಾಗಿದ್ದೇವೆ ಎಂದರು
ಮುಲ್ಕಿ ಬಸ್ ನಿಲ್ದಾಣ ಮಧ್ಯ ವ್ಯಸನಿಗಳ ಅಡ್ಡೆಯಾಗಿದ್ದು ಪೊಲೀಸರು ಗಸ್ತು ಬಲಪಡಿಸಿ ಪುಂಡು ಪೋಕರಿಗಳನ್ನು ನಿಯಂತ್ರಿಸಬೇಕು ಎಂದು ನಾಗರಿಕರು ಆಗ್ರಹಿಸಿದರು
ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿಯಾಗಿದ್ದು ಹೆದ್ದಾರಿ ಜಂಕ್ಷನ್ ಬಳಿ ಸೂಕ್ತ ಟ್ರಾಫಿಕ್ ಪೊಲೀಸ್ ಕಲ್ಪಿಸಿ ಅಪಘಾತಗಳನ್ನು ನಿಯಂತ್ರಿಸಲು ಸಭೆಯಲ್ಲಿ ಮಾಜೀ ನಗರ ಪಂಚಾಯತ್ ಸದಸ್ಯಅಬ್ದುಲ್ ರಜಾಕ್ ಒತ್ತಾಯಿಸಿದರು
ಮುಲ್ಕಿ ಪೊಲೀಸ್ ಠಾಣೆಗೆ ವಾಹನದ ಕೊರತೆ ಹಾಗೂ ಸುತ್ತ ಸಿಬ್ಬಂದಿ ನೇಮಕ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಕೋ ಲ್ನಾಡು ಪ್ರದೇಶದಲ್ಲಿ ಮಂಗಳಮುಖಿಯರ ಕಾಟ ವಿಪರೀತವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲು ನಾಗರಿಕರು ಒತ್ತಾಯಿಸಿದರು
ಸಭೆಯಲ್ಲಿ ನೂತನ ಇನ್ಸ್ಪೆಕ್ಟರ್ ಮಂಜುನಾಥ್ ನಾಗರಿಕರ ಪ್ರಶ್ನೆಗೆ ಉತ್ತರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಎಎಸ್ ಐ ಸಂಜೀವ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here