ಮಂಗಳೂರು: ಬಹುಮುಖ ಪ್ರತಿಭೆ, ನ್ಯಾಯವಾದಿ ರಾಜಶ್ರೀ ಜೆ. ಪೂಜಾರಿ ಇಂದು ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ರಾಜಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾಗಲಿ ಎಂದು ಮನೆಮಂದಿ, ಕುಟುಂಬಿಕರು ಹಾಗೂ ಅವರ ಹಿತೈಷಿಗಳು ಪ್ರಾರ್ಥಿಸುತ್ತಿದ್ದರು. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಬರಹಗಾರ್ತಿ, ಸಾಹಿತಿ, ನಿರೂಪಕಿ, ವಕೀಲೆ ಹೀಗೆ ನಾನಾ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ರಾಜಶ್ರೀ ಸಕ್ರಿಯವಾಗಿ ಇದೀಗ ಇಹಲೋಕ ತ್ಯಜಿಸಿದ್ದಾರೆ. ಸೌಮ್ಯ ಸ್ವಭಾವದಿಂದ ಬಹಳಷ್ಟು ಮಂದಿಗೆ ಆಪ್ತರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿದ್ದವು.

ರಾಜಶ್ರೀ ಅವರಿಗೆ ಜೀವನದಲ್ಲಿ ಬಹಳಷ್ಟು ಕನಸಿತ್ತು. ಐಎಎಸ್ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ ಬಾಳಿ ಬದುಕಬೇಕಾಗಿದ್ದ ಜೀವ ವಿಧಿಯಾಟಕ್ಕೆ ಬಲಿಯಾಗಿದೆ. ಅರಳಿ ನಲಿಯಬೇಕಾಗಿದ್ದ ಬಹುಮುಖ ಪ್ರತಿಭೆ ಮರೆಯಾಗಿದೆ.

