ಪುಷ್ಪ ಪ್ರಸಾದ್ ಉಡುಪಿ ಅವರಿಗೆ ನಾಡೋಜ ಡಾ ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026 ಪ್ರದಾನ

0
6

ಪುಷ್ಪ ಪ್ರಸಾದ್ ಉಡುಪಿ ಅವರಿಗೆ ಕನ್ನಡ ಭವನ ಮತ್ತು ಗ್ರಂಥಾಲಯ(ರಿ) ಇದರ ರಜತ ಮಹೋತ್ಸವ ಸಮಾರೋಪ 2026ರ ಅಂಗವಾಗಿ ನಾಡೋಜ ಡಾ.ಕೈಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026 ನ್ನು ದಿನಾಂಕ 26.07.26ರ ಭಾನುವಾರದಂದು ನುಳ್ಳಿಪಾಡಿಯ ಕನ್ನಡ ಭವನದಲ್ಲಿ ಶ್ರೀ ಶ್ರೀಮದೆಡನೀರು ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ದಿವ್ಯ ಹಸ್ತಗಳಿಂದ ಪ್ರದಾನ ಮಾಡಲಾಯಿತು.

ಪುಷ್ಪ ಪ್ರಸಾದ್ ಅವರ ಬರಹ, ಸಂಘಟನೆ ಮತ್ತು ಸಮಾಜ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಆಯೋಜಕರು ತಿಳಿಸಿರುತ್ತಾರೆ. ಇವರು ನ್ಯಾಯಾಂಗ ಇಲಾಖೆಯಲ್ಲಿ ಶೀಘ್ರಲಿಪಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಇವರ ಒಂಬತ್ತು ಕೃತಿಗಳು ಪ್ರಕಟಗೊಂಡಿರುತ್ತವೆ. ಹಲವು ನಿಯತಕಾಲಿಕಗಳಲ್ಲಿ ಹಾಗೂ ವರ್ತಮಾನ ಪತ್ರಿಕೆಯಲ್ಲಿ ಬರಹಗಳು ಪ್ರಕಟವಾಗುತ್ತಾ ಇವೆ. ಅಲ್ಲದೇ ಇವರ ಬರಹಗಳು ಪ್ರತಿನಿತ್ಯ ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾಗುತ್ತಿವೆ.

ವರದಿ : ಸುರೇಶ್ ಕುಮಾರ್ ಚಾರ್ವಕ