ಪ್ರೇರಣಾ ಶಾಲೆಯಲ್ಲಿ ” ಕಾರ್ಗಿಲ್ ವಿಜಯ ದಿವಸ್ ” ದಿನಾಚರಣೆ

0
25

ಮೂಡುಬಿದಿರೆ : “ಭಾರತೀಯ ಯೋಧರು , ಶಸ್ತ್ರ ರಹಿತರಾಗಿದ್ದವರನ್ನು , ಅವರು ಶತ್ರುಗಳೇ ಆದರೂ ಸಹಾ ಶಸ್ತ್ರ ಪ್ರಯೋಗ ಮಾಡದ ಉದಾತ್ತ ಗುಣವುಳ್ಳವರು ” ಎಂದು ಭಾರತೀಯ ನಿವೃತ್ತ ಯೋಧ NB ಸುಬೇದಾರ್ ಹರೀಶ್ ರವರು ನುಡಿದರು .

ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಭಾರತಾಂಬೆಯ ಸುಪುತ್ರನಾಗಿ ಇದು ನನ್ನ ಬದ್ಧತೆಯೂ ಆಗಿತ್ತು ” ಎಂದು 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸಿದNB ಸುಬೇದಾರ್ ಹರೀಶ್ ರು , ಕಾರ್ಗಿಲ್ ನ ಅನುಭವದ ಸಂತಸವನ್ನು ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಜರುಗಿದ ” ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ ” ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಂಚಿಕೊಂಡರು .

ಪ್ರೇರಣಾ ಶಾಲೆಯ ಮುಖ್ಯ ಮಾತಾಜಿಯವರಾದ ವತ್ಸಲಾ ರಾಜೇಶ್ ರವರು , ” ನನ್ನ ಪತಿಯೂ ಭಾರತೀಯ ಸೇನೆಯ ಯೋಧರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ತಾನೂ ಪತಿಯೊಂದಿಗೆ ದುರ್ಗಮ ಪ್ರದೇಶಗಳಲ್ಲಿ ವಾಸಿಸಿದ ಅನುಭವ ನನಗಿದೆ . ಯೋಧನ ಪತ್ನಿಯಾಗಿ ನಾನು ಸಾರ್ಥಕತೆ ಪಡೆದಿದ್ದೇನೆ ” ಎಂದರು ‌. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು , ” ರೈತರು ದೇಶದ ಬೆನ್ನೆಲುಬಾದರೆ , ಯೋಧರು ದೇಶದ ಹೃದಯವಿದ್ದಂತೆ . ನಾವಿಂದು ನೆಮ್ಮದಿಯ , ಸಂತಸದ ಜೀವನ ನಡೆಸುತ್ತೇವೆ ಅಂದರೆ ಅದಕ್ಕೆ ಮುಖ್ಯ ಕಾರಣ , ತಮ್ಮ ಜೀವದ ಹಂಗು ತೊರೆದು , ಚಳಿ , ಬಿಸಿಲು , ಮಳೆ ಎನ್ನದೇ ದೇಶ ರಕ್ಷಿಸುವ ಯೋಧರು ” ಎಂದು ನುಡಿದರು .

ಶಾಲಾ ಶಿಕ್ಷಕಿ ಹರ್ಷಿತಾರವರು ಅತಿಥಿಗಳನ್ನು ಸ್ವಾಗತಿಸಿದರೆ , ಶಿಕ್ಷಕಿ ಗ್ರೀಷ್ಮಾರವರು ಕಾರ್ಯಕ್ರಮ ನಿರೂಪಿಸಿದರು .ಶಿಕ್ಷಕಿ ಕುಮಾರಿ ಮಯೂರಿಯವರು ಧನ್ಯವಾದ ಅರ್ಪಿಸಿದರು . ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮೂಡುಬಿದಿರೆ ಮೂಲದNB ಸುಬೇದಾರ್ ಹರೀಶ್ ರವರನ್ನು ಪ್ರೇರಣಾ ಶಾಲೆ ಹಾಗೂ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ( ರಿ ) ಮೂಡುಬಿದಿರೆ ವತಿಯಿಂದ ಶಾಲು ಹೊದಿಸಿ , ನೆನಪಿನ ಕಾಣಿಕೆ ನೀಡಿ , ಶಾಲಾ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು ಗೌರವಿಸಿದರು .