ಕೋಡಿ ಬಂಗೇರ ಕುಟುಂಬಸ್ಥರ ಮೂಲಸ್ಥಾನದಲ್ಲಿ ಆ.17ರಂದು ನಾಗರ ಪಂಚಮಿ

0
48

ಕೋಡಿ ಮೀಯಪದವು : ಕುಲಾಲ ಬಂಗೇರ ಕುಟುಂಬಸ್ಥರ ಮೂಲಸ್ಥಾನವಾದ ಕೋಡಿ ಮೀಯಪದವು ಶ್ರೀ ಮೂಲನಾಗ ಸಾನಿಧ್ಯದಲ್ಲಿ ನಾಗರ ಪಂಚಮಿ ಉತ್ಸವವು ಆ.17ರಂದು ಸೋಮವಾರ ನಡೆಯಲಿದೆ. ಕುಟುಂಬದ ತಂತ್ರಿವರ್ಯರಾದ ವೇ.ಮೂ. ಬೋಳಂತಕೋಡಿ ರಾಮ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ನಾಗರ ಪಂಚಮಿ ಉತ್ಸವದ ಅಂಗವಾಗಿ ಬೆಳಗ್ಗೆ 9.30ಕ್ಕೆ ಪಂಚಾಮೃತಾಭಿಷೇಕ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಮಹಾಪೂಜೆ ಪ್ರಾರಂಭವಾಗಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ 1.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಕುಟುಂಬಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗದೇವರ ಪೂರ್ಣಾನುಗ್ರಹ ಪಡೆಯುವಂತೆ ಕುಟುಂಬಸ್ಥರು ವಿನಂತಿಸಿದ್ದಾರೆ.

ಉತ್ಸವದ ಅಂಗವಾಗಿ ನಾಗ ತಂಬಿಲ ಸೇವೆಗೂ ಅವಕಾಶ ಕಲ್ಪಿಸಲಾಗಿದೆ. ನಾಗ ತಂಬಿಲ ಮಾಡಲಿಚ್ಛಿಸುವವರು ರೂ.250 ಶುಲ್ಕದೊಂದಿಗೆ ಕಡ್ಡಾಯವಾಗಿ ಎರಡು ಎಳನೀರು ತಂದು ಒಪ್ಪಿಸಿ ರಶೀದಿ ಮಾಡಿಸಿಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಪೂಜಾ ಕಾರ್ಯಕ್ರಮಕ್ಕೆ ಅಗತ್ಯವಿರುವ ಹೂವು, ಹಣ್ಣು, ಹಿಂಗಾರ, ಅಕ್ಕಿ, ತೆಂಗಿನಕಾಯಿ, ತೆಂಗಿನ ಎಣ್ಣೆ, ಬಾಳೆ ಎಲೆ ಹಾಗೂ ಅಡಿಕೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.

ಕುಟುಂಬಸ್ಥರು ಬಾಕಿ ಇರುವ ವಂತಿಗೆಯನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ. ಪ್ರತ್ಯೇಕ ತರವಾಡು ಮನೆಯನ್ನು ಹೊಂದಿರುವ ಮೂರು ತರವಾಡುಗಳ ಸದಸ್ಯರು ಇದೇ ದಿನ ತಮ್ಮ ವರ್ಷಾವಧಿ ವಂತಿಗೆಯನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ.

ಇಡಕರ ಸಮಿತಿ ಹಾಗೂ ಶುಲಾರಿ ಬಂಗೇರ ಕುಟುಂಬಸ್ಥರ ಮೂಲಸ್ಥಾನ ನೋಡಿ ಟ್ರಸ್ಟ್‌ (ರಿ.), ಮೀಯಪದವು ವತಿಯಿಂದ ಉತ್ಸವದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕುಟುಂಬಸ್ಥರು ಮತ್ತು ಭಕ್ತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.