ರೇಡಿಯೊ ಮಣಿಪಾಲದಲ್ಲಿ ‘ಗ್ರಾಹಕ ಜಾಗೃತಿ’ ಸರಣಿಯ- 1ನೇ ಸಂಚಿಕೆ ಪ್ರಸಾರ

0
11

ಮಣಿಪಾಲ್ : ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಅರ್ಪಿಸುತ್ತಿದೆ ಗ್ರಾಹಕ ಜಾಗೃತಿ ಸರಣಿ ಕಾರ್ಯಕ್ರಮ. ಈ ಸರಣಿಯ 1 ನೇ ಸಂಚಿಕೆ ಜುಲೈ ತಿಂಗಳ ದಿನಾಂಕ 2 ರಂದು ಗುರುವಾರ ಸಂಜೆ 4.10ಕ್ಕೆ ಪ್ರಸಾರವಾಗಲಿದೆ.

ಇಂದಿನ ಸಂಚಿಕೆಯಲ್ಲಿ ಬಳಕೆದಾರರ ವೇದಿಕೆ ಉಡುಪಿ ಇದರ ಟ್ರಸ್ಟೀ ಆಗಿರುವ ಎನ್.ಆರ್ ಗೋವಿಂದ ಮಾಹಿತಿ ನೀಡಲಿದ್ದಾರೆ. ಜುಲೈ 3 ರಂದು ಮಧ್ಯಾಹ್ನ 2.10ಕ್ಕೆ ಇದರ ಮರುಪ್ರಸಾರವಿರುವುದು.

ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here