ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು)

0
16

ಆ.30ರಂದು 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಸಾಧಕರಿಗೆ ಸನ್ಮಾನ

ಮುಂಬೈ : ಶ್ರಾವಣ ಮಾಸದ ಶುಭ ದಿನಗಳಲ್ಲಿ ಸಂಪತ್ತಿನ ಆದಿ ದೇವತೆ ಶ್ರೀ ಮಹಾಲಕ್ಷ್ಮೀಯ ಪೂಜೆಯ ಮೂಲಕ ಪ್ರಸನ್ನಗೊಳಿಸುವ ಮಹಾಕಾರ್ಯದ ಅಂಗವಾಗಿ ಸುಮಂಗಳೆಯರಿಂದ ಪ್ರತಿ ವರ್ಷ ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಇವರ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂತೋಷ್ ಭಟ್, ಚಾರ್‌ಕೋಪ್, ಕಾಂದಿವಲಿ ಅವರ ಪೌರೋಹಿತ್ಯದಲ್ಲಿ ದಿನಾಂಕ ರವಿವಾರ, ಆಗಸ್ಟ್ 30, ರಂದು, ಬೆಳಿಗ್ಗೆ 8ರಿಂದ ಸಂಜೆ 5,30 ರ ವರೆಗೆ ವಿವಿಧ ಧಾರ್ಮಿಕ ಗಳೊಂದಿಗೆ ಗೋಮಾಂತಕ್ ಸೇವಾ ಸಂಘ, ಗೋಮಾಂತಕ್ ಚೌಕ್, ಮಾಳವೀಯ ರಸ್ತೆ, ವಿಲೇ ಪಾರ್ಲೆ ಪೂರ್ವ ಮುಂಬಯಿ ನಡೆಯಲಿದೆ.

ಬೆಳಿಗ್ಗೆ ಗಂಟೆ ೮ರಿಂದ 10.30ರ ವರೆಗೆ ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಮತ್ತು ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಗಳ ಗುರುವಂದನಾ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ, 10.30ಕ್ಕೆ ಪೂಜಾ ನೃತ್ಯ, ಬೆಳಿಗ್ಗೆ 10.30 ರಿಂದ 11.30 ರ ತನಕ ಸಭಾ ಕಾರ್ಯಕ್ರಮ, 11.30ರಿಂದ ಮಧ್ಯಾಹ್ನ 1 ರ ತನಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ನಂತರ ಅನ್ನ ಸಂತರ್ಪಣೆ. ಅಪರಾಹ್ನ 2 ರಿಂದ 5.30 ರ ತನಕ ಪರಿಸರದ ವಿವಿಧ ಪ್ರತಿಭೆಗಳಿಂದ, ಬಳಗದ ಮಹಿಳೆಯರಿಂದ ಹಾಗೂ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನಾನಿಲ್ತಾರ್ ಅಭಿಮಾನಿ ಬಳಗ, ಮುಂಬಯಿಯ ಅಧ್ಯಕ್ಷರಾದ ಹರೀಶ್‌ ಡಿ. ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್, ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ಡಿ. ಐ. ಮೂಲ್ಯ, ಹೋಟೇಲು ಉದ್ಯಮಿ ಮೋಹನ್ ಶೆಟ್ಟಿ ಸಾಂತೂರು, ಎಸ್.ವಿ.ಸಿ. ಬ್ಯಾಂಕ್ ನ ಭರತ್ ಪೂಜಾರಿ, ನಾನಿಲ್ತಾರ್ ಕುಲಾಲ ಸಂಘ ಮುಂಡ್ಕೂರು ಅಧ್ಯಕ್ಷರಾದ ಜಯರಾಮ ಕುಲಾಲ್, ಹೋಟೇಲು ಉದ್ಯಮಿ ಪದ್ಮನಾಭ ಬಂಗೇರ, ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಎಸ್. ಕುಲಾಲ್, ಸಮಾಜ ಸೇವಕಿ ಲತಾ ಕೃಷ್ಣ ಬಂಗೇರ ಮಾಹಿಮ್, ಕುಲಾಲ ಸಂಘದ ಸಿ ಎಸ್ ಟಿ ಮುಳೂಂಡ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಇಂದಿರಾ ಆರ್ ಬಂಜನ್, ಕುಲಾಲ ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಮತ್ತು ಸಾಕೀನಾಕಾದ ಸಮಾಜ ಸೇವಕಿ ರುಕ್ಮಿಣಿ ಯಶೋಧರ್ ಸಾಲ್ಯಾನ್ ಉಪಸ್ಥಿತರಿರುವರು.
ಈ ಸಮಾರಂಭದಲ್ಲಿ ಉದ್ಯಮಿ ನವೀನ್ ಅಂಚನ್, ನಾನಿಲ್ತಾರ್ ಅಭಿಮಾನಿ ಬಳಗ, ಮುಂಬಯಿಯ (ಮುಂಡ್ಕೂರು) ಇದರ ಸದಸ್ಯ ಲೋಕೇಶ್ ಸಾಲ್ಯಾನ್, ಸಂಚಾಲಕ ಕೃಷ್ಣ ಎಸ್ ಮೂಲ್ಯ ನಾಲಾಸೋಪಾರ ಇವರನ್ನು ಸನ್ಮಾನಿಸಲಾಗುವುದು.

ಭಕ್ತಾಭಿಮಾನಿಗಳು ಮತ್ತು ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) ಇದರ ಪರವಾಗಿ ಸಂಚಾಲಕರಾದ ಕೃಷ್ಣ ಮೂಲ್ಯ ನಾಲಾಸೋಪಾರ, ಉಪಾಧ್ಯಕ್ಶ ದಿನೇಶ್ ಮೂಲ್ಯ ಅಂಧೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್ ದಾಂಡ, ಕೋಶಾಧಿಕಾರಿ ರೋಹಿದಾಸ್ ಕೆ ಬಂಜನ್ ನಲಾಸೋಪಾರ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಮೂಲ್ಯ ಗೋರೆಗಾಂವ್, ಸದಾಶಿವ ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಗಳಾ ವಿಶ್ವನಾಥ ಕುಂದರ್ ಅಂಧೇರಿ ಮತ್ತು ಶಶಿಕಾಂತ್ ಮೂಲ್ಯ ವಿರಾರ್, ಸಲಹಾ ಸಮಿತಿ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.