ಪಿಲಿ ನಲಿಕೆ ಪಂತ – 2026 ಸೀಸನ್ 2 : ಅದಮಾರು ಹಿರಿಯ ಶ್ರೀಗಳಿಂದ ಆಶೀರ್ವಾದ

0
15

ಉಡುಪಿ: ತುಳುನಾಡಿನ ಹೆಮ್ಮೆಯ ಜಾನಪದ ಕಲೆ ಹುಲಿ ಕುಣಿತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಉಡುಪಿ ಜವನೆರ್ ಸಂಸ್ಥೆ ವಿಜಯ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸುತ್ತಿರುವ ಪಿಲಿ ನಲಿಕೆ ಪಂತ – 2026 ಸೀಸನ್ 2 ತುಳುನಾಡಿನ ಪ್ರಸಿದ್ಧ ಹುಲಿ ಕುಣಿತ ಸ್ಪರ್ಧೆಯು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆಪ್ಟೆಂಬರ್ 04, 2026 ಶುಕ್ರವಾರ ಮಧ್ಯಾಹ್ನ 2:30 ಕ್ಕೆ ಉಡುಪಿಯ ಕ್ರಿಶ್ಚಿಯನ್ ಪಿ.ಯು. ಕಾಲೇಜು ಮೈದಾನ, ಮಿಷನ್ ಕಾಂಪೌಂಡ್ ನಲ್ಲಿ ನಡೆಯಲಿದೆ.

ಈ ವೈಭವದ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನ ನೀಡಲು ನಮ್ಮ ಉಡುಪಿ ಜವನೆರ್ ತಂಡವು ಇಂದು ಅದಮಾರು ಮಠದ ಹಿರಿಯ ಸ್ವಾಮೀಜಿ ಪರಮಪೂಜ್ಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಪ್ರೀತಿಪೂರ್ವಕವಾಗಿ ಆಮಂತ್ರಿಸಿ, ದಿವ್ಯ ಆಶೀರ್ವಾದ ಪಡೆಯಿತು.

ಈ ಸಂದರ್ಭದಲ್ಲಿ ಅದಮಾರು ಮಠದ ಪ್ರಧಾನ ರಾಧ ಗೋವಿಂದ್ ರಾಜ್ ಭಟ್, ನಮ್ಮ ಉಡುಪಿ ಜವನೆರ್ ಸಂಸ್ಥಾಪಕರಾದ ವಿಜಯ ಶೆಟ್ಟಿ, ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಹಾಗೂ ಅರುಣ್ ಉಪಸ್ಥಿತರಿದ್ದರು.

ಆಕರ್ಷಕ ಬಹುಮಾನ:

ಈ ಬಾರಿ ವಿಜೇತ ತಂಡಗಳಿಗೆ ಭರ್ಜರಿ ಬಹುಮಾನ ಘೋಷಿಸಲಾಗಿದೆ.

ಪ್ರಥಮ ಬಹುಮಾನ: ರೂ. 1,50,000 ನಗದು + ರೂ. 50,000 ಮೌಲ್ಯದ MG ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಗಿಫ್ಟ್ ಕೂಪನ್

ದ್ವಿತೀಯ ಬಹುಮಾನ: ರೂ. 75,000 ನಗದು + ರೂ. 25,000 ಮೌಲ್ಯದ MG ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಗಿಫ್ಟ್ ಕೂಪನ್

ಇದು ಈ ಕಾರ್ಯಕ್ರಮದ 2ನೇ ವರ್ಷದ ಸಂಭ್ರಮವಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ತುಳುನಾಡಿನ ಹುಲಿ ವೇಷ ತಂಡಗಳು ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಲಿವೆ.

ಕಾರ್ಯಕ್ರಮದ ನೇರ ಪ್ರಸಾರವು YouTube / Facebook / ನಮ್ಮ ಉಡುಪಿ TV ಯಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9686597193, 9019642336, 8105501903, 9844651562

ವರದಿ: ವಿನೋದ್ ಶೆಟ್ಟಿ, ಉಡುಪಿ