ದೇಶ ಸೆವೇಯೇ ಈಶ ಸೇವೆಯೆಂಬ ನಾರಾಯಣಗುರುಗಳ ಸಂದೇಶ ಸರ್ವಕಾಲಿಕ : ಗಣರಾಜ್ ಭಟ್

0
83

ಬಂಟ್ವಾಳ : ದೇಶ ಸೇವೆಯೇ ಈಶ ಸೇವೆ ಎಂಬ ನಾರಾಯಣಗುರುಗಳ ತಾತ್ವಿಕ ಸಂದೇಶವು ಮಾನವೀಯತೆ, ಸಮಾನತೆ ಮತ್ತು ಸೇವೆಯ ಮೌಲ್ಯಗಳನ್ನು ತಳಮಳಗಳಿಂದ ಕೂಡಿದ ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಿದ್ದು, ಮುಂದಿನ ಪೀಳಿಗೆಗಳಿಗೆ ಕೂಡ ಬೆಳಕು ನೀಡುವ ಶಾಶ್ವತ ಸಂದೇಶವಾಗಿದೆ ಎಂದು ಸಮಾಜ ಸೇವಕ, ಯಕ್ಷಗಾನ ಕಲಾವಿದ ಗಣರಾಜ್ ಭಟ್ ತಿಳಿಸಿದರು.

ಅವರು ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಸದಸ್ಯ ನಿಕೇಶ್ ಕೋಟ್ಯಾನ್ ಇವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆ ಗುರುತತ್ವವಾಹಿನಿ ಮಾಲಿಕೆ 45 ರಲ್ಲಿ ಗುರುಸಂದೇಶ ನೀಡಿದರು

ಕಾರ್ಯಕ್ರಮದಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಶ್ರೀ ರಾಮಾಂಜನೇಯ ಭಜನಾ ಮಂದಿರ ಕಾರ್ಲ ಪೆರ್ನೆ ಯ ಸದಸ್ಯ ಲಿತೀಶ್ ಕುಲಾಲ್, ಯುವವಾಹಿನಿ ನಿರ್ದೇಶಕ ಮಹೇಶ್ ಬೊಳ್ಳಾಯಿ, ಲೋಹಿತ್ ಕನಪಾದೆ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಅರುಣ್ ಮಹಾಕಾಳಿಬೆಟ್ಟು, ಹರೀಶ್ ಎಸ್ ಕೊಟ್ಯಾನ್, ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ಸದಸ್ಯರಾದ ಜಗದೀಶ್ ಕಲ್ಲಡ್ಕ, ಸತೀಶ್ ಬಾಯಿಲ,ಕಾವ್ಯ ಸೊರ್ನಾಡ್, ಅಜಯ್ ನರಿಕೊಂಬು, ಹರೀಶ್ ಅಜೆಕಲಾ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಸಂಕೀರ್ತನೆ ಸೇವೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸಾತ್ವಿಕ್ ದೇರಾಜೆ ಸಹಕರಿಸಿದರು

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here