ಯುವ ಸಮುದಾಯದಲ್ಲಿ ನಾರಾಯಣಗುರುಗಳ ಸಂದೇಶ ಜೀವಂತವಾಗಿರಬೇಕು : ದಿನೇಶ್ ಸುವರ್ಣ ರಾಯಿ

0
76

ರಾಯಿ : ನಾರಾಯಣಗುರುಗಳ ಸಮಾನತೆ, ಮಾನವೀಯತೆ ಮತ್ತು ಶಿಕ್ಷಣದ ಸಂದೇಶಗಳು ಇಂದಿನ ಯುವ ಸಮುದಾಯಕ್ಕೆ ಅತ್ಯಂತ ಪ್ರಸ್ತುತವಾಗಿವೆ ಎಂದು ದಿನೇಶ್ ಸುವರ್ಣ ರಾಯಿ ಹೇಳಿದರು.
ಮೌಲ್ಯಾಧಾರಿತ ಚಿಂತನೆ ಇಲ್ಲದೆ ಸಮಾಜದ ಸಮತೋಲನ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಯುವಕರು ಗುರುಗಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಸಂಘಟನೆಗಳ ಮೂಲಕ ಈ ಸಂದೇಶವನ್ನು ಮನೆಮನೆಗೂ ತಲುಪಿಸಿ ಜೀವಂತವಾಗಿರಿಸಬೇಕಾಗಿದೆ ಎಂದು ಕರೆ ನೀಡಿದರು.

ಅವರು ಡಿಸೆಂಬರ್ 26 ಗುರುವಾರ ಸಿದ್ದಕಟ್ಟೆ ನಾರಾಯಣಗುರು ಮಂದಿರದಲ್ಲಿ, ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನಾ 65 ನೇ ಮಾಲಿಕೆಯಲ್ಲಿ 65 ಗುರುಸಂದೇಶ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸಿದ್ದಕಟ್ಟೆ.ಸಂಘದ ಅಧ್ಯಕ್ಷರು ಕಿರಣ್ ಕುಮಾರ್ ಮಂಜಿಲ, ಮಹಿಳಾ ಸಮಿತಿ ಅಧ್ಯಕ್ಷರು ಅನುರಾಧ ಜಾನುಗುರಿ, ಕಾರ್ಯದರ್ಶಿ ರತ್ನಾಕರ ಮದಂಗೋಡಿ, ಕೋಶಾಧಿಕಾರಿ ಯೋಗೀಶ್ ಕರ್ಪೆ,ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೇಲು. ಉಪಾಧ್ಯಕ್ಷರಾದ ಕಿರಣ್ ಪೂoಜರೆಕೋಡಿ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಸದಸ್ಯರಾದ ಯತೀಶ್ ಬೊಳ್ಳಾಯಿ , ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ.ಶಿವಾನಂದ ಎಂ, ನಾಗೇಶ್ ಪೊನ್ನೋಡಿ, ಕಾರ್ತಿಕ್ ದೇರಾಜೆ, ಪೃತ್ವಿಕ್ ಬೊಲ್ಯಾರ್ ವಿನಯ ಆಚಾರ್ಯ ಮೊದಲದವರು ಉಪಸ್ಥಿತರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಸಮಾಜಸೇವಾ ನಿರ್ದೇಶಕರಾದ ಪ್ರಜಿತ್ ಅಮೀನ್ ಸ್ವಾಗತಿಸಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

LEAVE A REPLY

Please enter your comment!
Please enter your name here