ರಾಷ್ಟ್ರೀಯ ಆಯುರ್ವೇದ ದಿನಾಚರಣೆ

0
193


ಉಡುಪಿ: ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮಂಗಳವಾರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಆಯುರ್ವೇದ ಪ್ರಾಚಾರ್ಯ ಡಾ. ವಿ.ಕೆ. ಶ್ರೀಧರ ಹೊಳ್ಳ ಮುಖ್ಯ ಅತಿಥಿಯಾಗಿ ಆಗಮಿಸಿ, ದೈನಂದಿನ ಜೀವನದಲ್ಲಿ ಆಯರ‍್ವೇದದ ಬಗ್ಗೆ ಅಳವಡಿಕೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ, ಮುನಿಯಾಲ್ ಸಂಸ್ಥೆಯ ಟ್ರಸ್ಟಿ ಡಾ.ಶ್ರದ್ಧಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ.ಶುಭಾ ಎಂ, ಪಿಜಿ ಡೀನ್ ಡಾ. ದಿನೇಶ್ ನಾಯುಕ್ ಜೆ ಯುಜಿ ಡೀನ್ ಡಾ. ರವಿಶಂಕರ್ ಶೆಣೈ ಉಪಸ್ಥಿತರಿದ್ದರು.

ಜೋಶ್ನಾ ಸ್ವಾಗತಿಸಿ, ಡಾ.ವಿದ್ಯಾ ಬಲ್ಲಾಲ್ ವಂದಿಸಿದರು. ಡಾ.ಚೈತ್ರಾ ಅತಿಥಿಗಳ ಕಿರು ಪರಿಚಯ ಮಾಡಿಕೊಟ್ಟರು. ಡಾ.ದೀಪ್ತಿ ಬಹುಮಾನಿತರ ಹೆಸರನ್ನು ವಾಚಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ.ಶ್ರುತಿ ಮತ್ತು ಡಾ.ರಕ್ಷಾ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ನಂತರ ಸಂಸ್ಥೆಯ ವಿವಿಧ ವಿಭಾಗಗಳಿಂದ ಆಯುರ್ವೇದ ವಸ್ತು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಆಯುರ್ವೇದ ದಿನಾಚರಣೆಯ ಪೂರ್ವಭಾವಿಯಾಗಿ ಮಣಿಪಾಲದ ಸಮೀಪದ ಶಾಲೆಗಳಲ್ಲಿ ಮಾಹಿತಿ ಶಿಬಿರ, ಯೋಗ ಪ್ರಾತ್ಯಕ್ಷಿಕೆ, ಪೌಷ್ಠಿಕ ಆಹಾರ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು. ಜೊತೆಗೆ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ, ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯರಿಗಾಗಿ ಮತ್ತು ಗರ್ಭಿಣಿಯರಿಗೆ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರವನ್ನು ಬಡಗಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾಯಿತು. ನೋಡಲ್ ಆಫೀಸರ್ ಡಾ. ಪ್ರೀತಿ ಪಾಟೀಲ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here