ಬಡಗಬೆಳ್ಳೂರು: ಮಿಥುನ್ ಬಡಗ ಬೆಳ್ಳೂರು ಅವರ ಗಾಯನ ಅಭಿನಯ ನಿರ್ಮಾಣದ ಭ್ರಾಮರಿ ತುಳು ಭಕ್ತಿ ಸುಗಿಪು ತುಳುಭಕ್ತಿ ಗೀತೆಯ ಬಿಡುಗಡೆ ಸಮಾರಂಭವು ಸೆ. 28ರಂದು ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ದೀಪಿಕಾ ಸುನೀಲ್ ವಿಶ್ವಕರ್ಮ ಮತ್ತು ಕಾವ್ಯ ಕುಂಜತ್ತಬೈಲು ಗಾಯನ ಮತ್ತು ಅಭಿನಯದಲ್ಲಿ ಭಕ್ತಿಗೀತೆ ಮೂಡಿಬಂದಿದ್ದು, ರಕ್ಷಿತ್ ಕೊಲ್ಯ ನಿರ್ದೇಶನ ಮಾಡಿದ್ದಾರೆ. ಶೈಲೇಶ್ ಆಚಾರ್ಯ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡಿಗೆ ಅನೀಶ್ ಕಿನ್ನಿಗೋಳಿ ಛಾಯಾಗ್ರಹಣ, ರೆಕಾರ್ಡಿಂಗ್ ಮತ್ತು ಸಂಕಲನ ನೀಡಿದ್ದಾರೆ. ಪ್ರಚಾರಕಲೆ ಕಿರಣ್ ಕೊಯಿಲ ನಿರ್ವಹಿಸಿದ್ದಾರೆ.

