ಬೆಂಗಳೂರು: ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ಸ್ ಡೇ 2026ರ ಅಂಗವಾಗಿ ಆಸ್ಪತ್ರೆಯು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅಸಾಧಾರಣ ಧೈರ್ಯ, ದೃಢಸಂಕಲ್ಪ ಹಾಗೂ ಸಹನಶೀಲತೆಯನ್ನು ಪ್ರದರ್ಶಿಸಿ ಯಶಸ್ವಿಯಾಗಿ ಚೇತರಿಸಿಕೊಂಡ ಕ್ಯಾನ್ಸರ್ ಸರ್ವೈವರ್‌ಗಳನ್ನು ಗೌರವಿಸುವ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು.

ಕಾರ್ಯಕ್ರಮದಲ್ಲಿ ಸುಮಾರು 15 ಮಂದಿ ಕ್ಯಾನ್ಸರ್ ಸರ್ವೈವರ್‌ಗಳು ಭಾಗವಹಿಸಿ, ರೋಗದ ವಿರುದ್ಧ ಹೋರಾಡಿದ ತಮ್ಮ ಅನುಭವಗಳು, ಸವಾಲುಗಳನ್ನು ಎದುರಿಸಿದ ಸಂದರ್ಭಗಳು ಹಾಗೂ ಚೇತರಿಕೆಯ ಪಯಣವನ್ನು ಹಂಚಿಕೊಂಡರು. ಅವರ ಬದುಕಿನ ಕಥೆಗಳು ಇತರ ರೋಗಿಗಳಿಗೆ ಹಾಗೂ ಕುಟುಂಬಸ್ಥರಿಗೆ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವಂತಿದ್ದವು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸರ್ವೈವರ್‌ಗಳನ್ನು ಸನ್ಮಾನಿಸಿ, ಅವರ ಧೈರ್ಯ ಮತ್ತು ಜೀವನೋತ್ಸಾಹವನ್ನು ಶ್ಲಾಘಿಸಿದರು. ಕ್ಯಾನ್ಸರ್‌ನ್ನು ಸಮಯೋಚಿತ ಚಿಕಿತ್ಸೆ, ಸಕಾರಾತ್ಮಕ ಮನೋಭಾವ ಮತ್ತು ಕುಟುಂಬದ ಬೆಂಬಲದ ಮೂಲಕ ಯಶಸ್ವಿಯಾಗಿ ಜಯಿಸಬಹುದೆಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರ ಸಾಧನೆಯನ್ನು ಗೌರವಿಸುವ ಜೊತೆಗೆ, ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

