ರಾಷ್ಟ್ರೀಯ ವೈದ್ಯರ ದಿನಾಚರಣೆ

0
8

ಮಂಗಳೂರು : ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಖ್ಯಾತ ಚರ್ಮರೋಗ ತಜ್ಞರಾದ ಡಾ. ಗಿರೀಶ ಬಿ.ಎಸ್. ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಗಾಗಿ ಸನ್ಮಾನಿಸಲಾಯಿತು.

ಡೆರಳಕಟ್ಟೆಯ ಶಿ ಓಂ, ಕ್ಷೇಮ ಡಾಕ್ಟರ್ಸ್ ಎನ್‌ಕ್ಲೇವ್ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಚಾರ್ಟರ್ ಅಧ್ಯಕ್ಷ ಲಯನ್ ವಿಜಯನ್ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಶ್ರೀ ಹರೀಶ್ ಭಂಡಾರಿ ಅವರು ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಲಯನಿಸ್ಟಿಕ್ ವರ್ಷ 2026–27ರ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದರು. ತಮ್ಮ ಭಾಷಣದಲ್ಲಿ ವೈದ್ಯ ಸಮುದಾಯದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ, ವೈದ್ಯರನ್ನು ಗೌರವಿಸುವ ಲಯನ್ಸ್ ಕ್ಲಬ್‌ನ ಕಾರ್ಯವನ್ನು ಅಭಿನಂದಿಸಿದರು.

ಚಾರ್ಟರ್ ಖಜಾಂಚಿ ಲಯನ್ ನಿತೀಶ್ ಕೃಷ್ಣ ಅವರು ಸಭೆಯನ್ನು ಸ್ವಾಗತಿಸಿದರು. ಲಯನ್ ಡಾ. ಅನುರೂಪಾ ಹೆಗ್ಡೆ ವಂದನಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲಯನ್ ಶಶಿ ಕುಮಾರ್ ನಾಯರ್, ಲಯನ್ ಧಾಮೋದರನ್, ಲಯನ್ ಜಿ. ಸುನಿಲ್ ಕುಮಾರ್ ಹಾಗೂ ಲಯನ್ ಫ್ಲಾವಿಯಾ ಡಿಸೋಜಾ ಅವರು ಮಾತನಾಡಿ, ಡಾ. ಗಿರೀಶ ಬಿ.ಎಸ್. ಅವರ ವೈದ್ಯಕೀಯ ಸಾಧನೆ ಹಾಗೂ ಮಾನವೀಯ ಸೇವೆಯನ್ನು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಗಿರೀಶ ಬಿ.ಎಸ್. ಅವರು ಲಯನ್ಸ್ ಕ್ಲಬ್‌ಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಸಮಾಜಕ್ಕೆ ಗುಣಮಟ್ಟದ ಹಾಗೂ ಮಾನವೀಯ ಆರೋಗ್ಯ ಸೇವೆಯನ್ನು ನೀಡುವ ಸಂಕಲ್ಪ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರು, ಗಣ್ಯರು ಹಾಗೂ ಆಹ್ವಾನಿತರು ಭಾಗವಹಿಸಿದ್ದು, ಜಿಲ್ಲಾ 317D ಯ “Inspiring Steps” ಧ್ಯೇಯದೊಂದಿಗೆ ಲಯನಿಸ್ಟಿಕ್ ವರ್ಷ 2026–27ಕ್ಕೆ ಸ್ಪೂರ್ತಿದಾಯಕ ಆರಂಭ ದೊರೆಯಿತು.

LEAVE A REPLY

Please enter your comment!
Please enter your name here