ರಾಷ್ಟ್ರೀಯ ರೈತರ ದಿನದಂದು ಕಾಸರಗೋಡು ಬಾಲಭವನ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ಹಿರಿಯ ಕೃಷಿಕರೂ ಆದ ದಿವಂಗತ ಸದಾಶಿವ ಶಾನ್ ಬಾಗ್ ಅವರ ಧರ್ಮ ಪತ್ನಿಯವರಾದ ಮೊಹಿನಿ ರಾವ್ ಅವರನ್ನು ಶಾಲೆಯ ಪರವಾಗಿ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ಶಾಲು, ಫಲಕ ನೀಡಿ ಗೌರವಿಸಿದರು. ಗವರವಾರ್ಪಣೆ ಸ್ವೀಕರಿಸಿ ಮಕ್ಕಳಿಗೆ ಶುಭ ನುಡಿಯನ್ನಾಡಿದರು.
ಈ ಸಮಾರಂಭದಲ್ಲಿ ಎಜುಕೇಷನ್ ಅಕಾಡಮಿಕ್ ಎಡ್ ವೈಸರ್ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿಟಿಎ ಉಪಾಧ್ಯಕ್ಷೆ ಶ್ರೀಮತಿ ಸೀಬಾ, ಕೋಶಾಧಿಕಾರಿ ಪೌಲೋಸ್, ಅಧ್ಯಾಪಿಕೆಯರು ಉಪಸ್ಥಿತರಿದ್ದರು. ಆರತಿ ಟೀಚರ್ ಸ್ವಾಗತಿಸಿ ಸುಜಾತ ಟೀಚರ್ ಧನ್ಯವಾದವಿತ್ತರು

