ಪೊಂಪೈ ಕಾಲೇಜು ಐಕಳ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

0
6

ಪೊಂಪೈ ಕಾಲೇಜು ಐಕಳದ ಗ್ರಂಥಾಲಯ ವಿಭಾಗವು ಐ. ಕ್ಯೂ. ಎ. ಸಿ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಕಾಲೇಜಿನ ಪ್ರೊವಿಡೆನ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೋಸ್ಸಿ ಪಿಂಟೋ, ಕಿನ್ನಿಗೋಳಿ ಇವರು ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ “ಜ್ಞಾನವೃದ್ಧಿ ಹಾಗೂ ವ್ಯಕ್ತಿತ್ವ ವಿಕಾಸದಲ್ಲಿ ಪುಸ್ತಕಗಳು ಮತ್ತು ಗ್ರಂಥಾಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ”. ಪೊಂಪೈ ಪದವಿ ಕಾಲೇಜಿನಲ್ಲಿ ನಾನು ಕಲಿಯುತ್ತಿದ್ದ ಸಮಯದಲ್ಲಿ ಸಾಹಿತ್ಯ ಆಸಕ್ತಿ ಬೆಳೆಯಲು ಆರಂಭವಾಯಿತು ಎಂದರು.

ಬಳಿಕ ತಾನೇ ರಚಿಸಿದ ಚುಟುಕು ಬರಹವನ್ನು ವಿದ್ಯಾರ್ಥಿಗಳ ಮುಂದೆ ವಾಚಿಸಿದರು. ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಮುಂಡ್ಕೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರು ಹಾಗೂ ಬರಹಗಾರರಾದ ಉದಯ್ ಕುಮಾರ್ ಹಬ್ಬು ಗೌರವಾನ್ವಿತ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಗ್ರಂಥಾಲಯದ ಮಹತ್ವವನ್ನು ವಿವರಿಸಿದರು.

ಪುಸ್ತಕಗಳ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರೊಂದಿಗೆ ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್.ಆರ್. ರಂಗನಾಥ್ ಅವರ ಭಾವಚಿತ್ರಕ್ಕೆ ಗಣ್ಯತಿ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಪುರುಷೋತ್ತಮ ಕೆ ವಿಯವರು ವಿದ್ಯಾರ್ಥಿಗಳು ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.

ಗ್ರಂಥಾಲಯ ವಿಭಾಗದ ಸಂಯೋಜಕರಾದ ವಿನೀತಾ ರೋಡ್ರಿಗಸ್ ಕಾರ್ಯಕ್ರಮ ಸಂಯೋಜಿಸಿದರು. ಕು. ತೇಜಸ್ವಿನಿ ಪ್ರಥಮ ಬಿ. ಎ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಪ್ರಥಮ ಬಿಕಾಮ್ ಧನ್ಯವಾದ ಸಲ್ಲಿಸಿದರು. ಗ್ರಂಥಾಲಯ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಯಾಗಿರುವ ಕು. ದಿಶಾ ತೃತೀಯ ಬಿಕಾಂ, ಹಾಗೂ ಕು. ಸ್ವಾತಿ ತೃತೀಯ ಬಿ.ಎ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.