
ತೋಡಾರು ಗ್ರಾಮದ ನಿವಾಸಿಯಾದಂತ ಪ್ರಸಾದ್ ಆಚಾರ್ಯ ಹಾಗೂ ಶಮಿತಾ ಆಚಾರ್ಯ ದಂಪತಿಗಳು ಕಳೆದ 4/5 ದಿನದ ಹಿಂದೆ ಬೆಳುವಾಯಿಯಲ್ಲಿ ನಡೆದಂತಹ ರಸ್ತೆ ಅಪಘಾತದಲ್ಲಿ ತೀವ್ರ ತಲೆಗೆ ಆಗು ಕಾಲಿಗೆ ಪೆಟ್ಟಾಗಿದ್ದು ಇವರ ಚಿಕಿತ್ಸೆಯ ವೆಚ್ಚಕ್ಕಾಗಿ 25 ಲಕ್ಷಗಳ ಅವಶ್ಯಕತೆ ಇದ್ದು ಒಂದು ಪುಟ್ಟ ಮಗುವನ್ನು ಹೊಂದಿದ್ದ ಇವರು ಈಗಾಗಲೇ ಮನೆ ನಿರ್ಮಿಸಿ ಅದರ ಸಾಲವನ್ನು ಹೊತ್ತು ಈಗ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿದಂತ ಈ ಹೃದಯ ವಿದ್ರಾವಕ ಘಟನೆಯಲ್ಲಿ ಬಡ ಕುಟುಂಬ ಇವರ 25 ಲಕ್ಷ ಚಿಕಿತ್ಸೆ ವೆಚ್ಚಕ್ಕಾಗಿ ನವ ಚೇತನ ಸೇವಾ ಬಳಗ ರಿಜಿಸ್ಟರ್ಡ್ ತೋಡಾರು ಈ ಸಂಸ್ಥೆ ಬೆಳಿಗ್ಗೆಯಿಂದ ರಾತ್ರಿ ಒಳಗೆ ಮೂಡುಬಿದ್ರೆಯ ಪರಿಸರದಲ್ಲಿ ಬಿಸಿಲುಗಾಳಿಯನ್ನು ಲೆಕ್ಕಿಸದೆ ಈ ಒಂದು ದಂಪತಿಗಳ ಚಿಕಿತ್ಸೆಗಾಗಿ ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹಣ ಅಭಿಯಾನವನ್ನು ನಡೆಸಿ ಇದರಲ್ಲಿ ಸೇರಿದಂತಹ ಒಟ್ಟು ಮೊತ್ತವನ್ನು 1,71,130 ರೂಪಾಯಿಗಳನ್ನು ಇಂದು ತೋಡಾರು ಶ್ರೀ ಕೊಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ಗರಡಿ ಈ ಕ್ಷೇತ್ರದಲ್ಲಿ ಪ್ರಸಾದ್ ಆಚಾರ್ಯ ಇವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮುಲ್ಕಿ ಮೂಡಬಿದ್ರಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಆಗಿರುವಂತ ರಂಜಿತ್ ಪೂಜಾರಿ ತೋಡಾರು, ತುಡರ್ ಚಾರಿಟೇಬಲ್ ಟ್ರಸ್ಟ್ ಇದರ ಸದಸ್ಯರಾಗಿರುವಂತಹ ಸುನಿಲ್ ಶೆಟ್ಟಿ ತೋಡಾರು, ಶರತ್ ಕೋಟ್ಯಾನ್ ತೋಡಾರು, ಹಾಗೂ ನವಚೇತನ ಸೇವ ಬಳಗ ತೋಡಾರು ಸಂಸ್ಥೆಯ ಸದಸ್ಯರಾಗಿರುವಂತಹ ಕಿರಣ್ ಕುಲಾಲ್ ಸಾಣೂರು, ದಾಮೋದರ್ ಮಿಜಾರ್, ದಿನಕರ್ ಮಿಜಾರ್, ಅಶೋಕ್ ಪೂಜಾರಿ ಪುತ್ತಿಗೆ, ಸುಜೀತ್ ಇರ್ವತ್ತೂರು, ಪ್ರಥಮ್ ಪೂಜಾರಿ ಮಿಜಾರ್ ಉಪಸ್ಥಿತರಿದ್ದರು.