ಬಲ್ಲಂಗೇರಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಅ.20ರಂದು ನವರಾತ್ರಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

0
5

-ಮಂದಾರ ರಾಜೇಶ್ ಭಟ್
​
​ಕರಾವಳಿಯ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬಲ್ಲಂಗೇರಿಯ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವವು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಜರುಗಲಿದೆ.

ಭಗವಂತನ ಕೃಪೆ ಮತ್ತು ತಾಯಿಯ ದಿವ್ಯ ಅನುಗ್ರಹಕ್ಕಾಗಿ ಭಕ್ತಾದಿಗಳನ್ನು ಒಂದೆಡೆ ಸೇರಿಸಿ, ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಉತ್ಸವವನ್ನು ವರ್ಷಂ ಪ್ರತಿ ಆಚರಿಸಲಾಗುತ್ತಿದೆ.

​
ತುಳುನಾಡಿನ ಬೆಳ್ತಂಗಡಿ ತಾಲೂಕಿನ ​ಹೊಸಂಗಡಿ ಬಲ್ಲಂಗೇರಿಯ ಶ್ರೀ ಸೂರ್ಯನಾರಾಯಣ ಕ್ಷೇತ್ರದಲ್ಲಿ ದಿನಾಂಕ 20-10-2026ನೇ ಮಂಗಳವಾರದಂದು ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿಶ್ಚಯಿಸಲಾಗಿದೆ.

​ಕಾರ್ಯಕ್ರಮಗಳ ವಿವರ

​ಬೆಳಿಗ್ಗೆ 8:00 ರಿಂದ: ಗಣಪತಿ ಹವನ, ಶ್ರೀ ಸೂರ್ಯನಾರಾಯಣ ದೇವರಿಗೆ ವಿಶೇಷ ಪೂಜೆ, ತೆನೆ ಪೂಜೆ ಹಾಗೂ ‘ಕದಿರು’ ಕೊಡುವ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

​ಸಂಜೆ 6:00 ರಿಂದ: ದುರ್ಗಾ ಪೂಜೆ ಪ್ರಾರಂಭಗೊಳ್ಳಲಿದೆ.
​ಸಂಜೆ 6:00 ರಿಂದ 8:00 ರವರೆಗೆ: ವಾಹನ ಪೂಜೆ ಆಯೋಜಿಸಲಾಗಿದೆ.
​ರಾತ್ರಿ 8:30 ಕ್ಕೆ: ಮಹಾಪೂಜೆ ಮತ್ತು ಪ್ರಸಾದ ವಿತರಣೆ ಜರುಗಲಿದೆ.
​ರಾತ್ರಿ 9:00 ಕ್ಕೆ: ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ಭೋಜನ (ಅನ್ನಸಂತರ್ಪಣೆ) ಇರಲಿದೆ.

​ವಿಶೇಷ ಸೇವೆಗಳು ಹಾಗೂ ಸಹಕಾರ

ಕ್ಷೇತ್ರದಲ್ಲಿ ಸಂಕಲ್ಪ ಸಹಿತ ಶ್ರೀ ದುರ್ಗಾ ಪೂಜೆ, ಅನ್ನದಾನ, ಹೂವಿನ ಪೂಜೆ ಹಾಗೂ ವಾಹನ ಪೂಜೆ ಮುಂತಾದ ವಿವಿಧ ಸೇವೆಗಳಿಗೆ ಅವಕಾಶವಿದ್ದು, ಭಕ್ತಾದಿಗಳು ಹೂವು, ಹಿಂಗಾರ ಹಾಗೂ ಹಣ್ಣುಕಾಯಿಗಳನ್ನು ನೀಡಿ ಸಹಕರಿಸಬಹುದಾಗಿದೆ ಎಂದು ಶ್ರೀ ಸೂರ್ಯನಾರಾಯಣ ​ಕ್ಷೇತ್ರ ಪುನರ್ ನಿರ್ಮಾಣ ಸಮಿತಿ, ಆರಾಧನಾ ಸೇವಾ ಟ್ರಸ್ಟ್ ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಭಕ್ತಾದಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಊರ ಪರವೂರ ಭಕ್ತಾದಿಗಳು ಸಕುಟುಂಬಿಕರಾಗಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕಾಗಿ ಕೋರಲಾಗಿದೆ.

​”ನವರಾತ್ರಿಯ ಈ ಪವಿತ್ರ ದಿನಗಳಲ್ಲಿ ಜಗನ್ಮಾತೆ ದುರ್ಗಾದೇವಿ ಹಾಗೂ ಶ್ರೀ ಸೂರ್ಯನಾರಾಯಣ ಸ್ವಾಮಿಯ ಆರಾಧನೆಯು ನಮ್ಮ ಮನಸ್ಸಿನ ಅಜ್ಞಾನವೆಂಬ ಕತ್ತಲೆಯನ್ನು ದೂರಗೊಳಿಸಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ.

ಭಕ್ತಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗೋಣ ಎಂಬುದಾಗಿ ಹಾಗೂ ಸೇವೆಗಳ ಹೆಚ್ಚಿನ ವಿವರಗಳಿಗಾಗಿ ಶ್ರೀ ಸೂರ್ಯನಾರಾಯಣ ಆರಾಧನಾ ಟ್ರಸ್ಟ್ ಹಾಗೂ ಪುನರ್ ನಿರ್ಮಾಣ ಸಮಿತಿ ಸಂಪರ್ಕಿಸುವಂತೆ ವಿನಂತಿಸಿದೆ