ವಿಶೇಷ ವರದಿ- ಮಂದಾರ ರಾಜೇಶ್ ಭಟ್
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿಯಲ್ಲಿ ನದಿ ದಂಡೆಯ ಮಡಿಲಿನಲ್ಲಿ ಕಂಗೊಳಿಸುತ್ತಿರುವ ಪವಿತ್ರ ತಪೋಭೂಮಿ ಇದೀಗ ಪವಿತ್ರ ಆರಾಧನಾ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಪ್ರಶಾಂತ ನದಿತೀರದಲ್ಲಿ ಪುರಾತನ ದೇವಸ್ಥಾನದ ಕುರುಹುಗಳು ಕಂಡು ಬಂದಿದ್ದವು .
ಜಾಗವನ್ನು ಸ್ವಚ್ಛಗೊಳಿಸಿ ಪರಿಶೀಲಿಸಿದಾಗ ಅಲ್ಲಿ ಅತ್ಯಂತ ಪುರಾತನವಾದ ಶ್ರೀ ಸೂರ್ಯನಾರಾಯಣ ಸ್ವಾಮಿಯ ದೈವಿಕ ಸನ್ನಿಧಿ ಇರುವುದು ದೃಢಪಟ್ಟಿತ್ತು.
ದೇವಾಲಯವನ್ನು ಊರ ಹಾಗೂ ಪರವೂರ ಭಕ್ತರು ಒಟ್ಟಾಗಿ ಕೈಜೋಡಿಸಿ, ದಾನಿಗಳ ಉದಾರ ಸಹಾಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಶ್ರಮದಾನದ ಸಹಕಾರದಿಂದ ಸುಂದರವಾದ ದೇವಾಲಯದ ನಿರ್ಮಾಣ ಕಾರ್ಯವು ಈಗ ಯಶಸ್ವಿಯಾಗಿ ಸಂಪೂರ್ಣಗೊಳ್ಳುತ್ತಿದೆ.
ಇದೀಗ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮುಹೂರ್ತ ನಿಗದಿಯಾಗಿದೆ. February 7 to February 10, 2027 ರವರೆಗೆ ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಪುಣ್ಯ ಕಾರ್ಯಕ್ರಮಗಳು ನೆರವೇರಲಿವೆ ಎಂದು ಜೀರ್ಣೋದ್ಧಾರ ಮತ್ತು ಆರಾಧನಾ ಸಮಿತಿ ತಿಳಿಸಿದೆ.

