ಮರದಂತೆ ಬೆಳೆದ ಹುಲ್ಲು ಕರ್ವಾಲು ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಸಾಗುವುದೇ ಸವಾಲು ಹುಲ್ಲು ಕಟಾವಿಗೆ ಆಗ್ರಹ

0
14

ಉಡುಪಿ: ಡಪಿಂಗ್ ಯಾರ್ಡ್ ಪ್ರದೇಶದಲ್ಲಿ ನೂರಾರು ಮನೆಗಳಿದ್ದು ಡಂಪಿಂಗ್ ಯಾರ್ಡ್ ಮಾತ್ರವಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಚೇರಿ, ಗ್ರಂಥಾಲಯ ಸೇರಿದಂತೆ ಅನೇಕ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ನೂರಾರು ವಾಹನಗಳು ಈ ಭಾಗದಿಂದ ಸಂಚರಿಸುತ್ತಿದ್ದರು ಸಹ ಬೃಹದಾಕಾರವಾಗಿ ಮರಗಳಂತೆ ಬೆಳೆದಿರುವ ಹುಲ್ಲುಗಳನ್ನು ಕಟಾವು ಮಾಡದೇ ಇರುವುದರಿಂದ ಸೋಮವಾರ ಬೆಳಗ್ಗೆ ಸುರಿದ ಮಳೆಗೆ ಈ ಹುಲ್ಲುಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಎದುರಾಗುತ್ತಿದ್ದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಈಗಾಗಲೇ ಈ ಭಾಗದ ರಸ್ತೆಗಳು ಹಾಳಾಗಿದ್ದು ರಿಪೇರಿ ಮಾಡದೇ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲಾಗಿದೆ. ಇದೀಗ ಈ ಭಾಗದಲ್ಲಿ ಹುಲ್ಲಿನ ಸಮಸ್ಯೆ ಎದುರಾಗಿದ್ದು ಆದಷ್ಟು ಬೇಗದಲ್ಲಿ ಇದನ್ನು ಕಟಾವು ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.