ನಾವುಂದ : 18ನೇ ವರ್ಷದ ಜಿಲ್ಲಾ ಮಟ್ಟದ ಸ್ಪರ್ಧೆ ಸಂಪನ್ನ

0
7

ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಮನೋಭಾವ ಬೆಳೆಸುವುದು. ಗಣಿತ ವಿಷಯದಲ್ಲಿ ಒಲವನ್ನು ಮೂಡಿಸುವುದು. ಯೋಗ ಅಧ್ಯಯನದ ಮೂಲಕ ಆರೋಗ್ಯವನ್ನು ಸ್ವಸ್ಥ್ಯವಾಗಿರಿಸುವುದು.ಭಾರತೀಯ ಸಂಸ್ಕೃತಿಯ ಪರಿಚಯವನ್ನು ತಿಳಿಸುವ ಸಂಸ್ಕೃತಿ ಜ್ಞಾನ , ವೇದಗಣಿತದ ಕುತೂಹಲವನ್ನು ಮೂಡಿಸುವ ಕಾರ್ಯಕ್ರಮ ಇದಾಗಿದೆ .ವಿದ್ಯಾಭಾರತಿ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧೆಯು ಸಮಾಜದ ಗಮನವನ್ನು ಸೆಳೆಯುತ್ತಿದೆ ಎಂದು ಉದ್ಘಾಟಕರಾದ ಸರಕಾರಿ ಪ್ರೌಢಶಾಲೆ ನಾವುಂದ ಪ್ರಭಾರ ಮುಖ್ಯೋಪಾಧ್ಯಾಯರು ಕೃಷ್ಣಮೂರ್ತಿ ಕೆ.ಪಿ. ನುಡಿದರು .

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ 18ನೇ ವರ್ಷದ ವಿಜ್ಞಾನ ಮೇಳ, ಗಣಿತ ,ವೇದಗಣಿತ ,ಯೋಗ, ಸಂಸ್ಕೃತಿ ಜ್ಞಾನ ಮಹೋತ್ಸವ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಪಿ. ಆರ್. ಎನ್ .ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಹೆಬ್ರಿ ಇಲ್ಲಿನ ಕೇಶವ ಭವನದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ಜರುಗಿದೆ.

ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪಾಂಡುರಂಗ ಪೈ ಸಿದ್ದಾಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .

ವೇದಿಕೆಯಲ್ಲಿ ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರಾಗಿರುವ ಗುರುದಾಸ್ ಶೆಣೈ ಹೆಬ್ರಿ , ಅಧ್ಯಕ್ಷರು ಆಡಳಿತ ಮಂಡಳಿ ಅಮೃತ ಭಾರತಿ ವಿದ್ಯಾಲಯ ಶೈಲೇಶ್ ಕಿಣಿ , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್ ವಿಜಯಕುಮಾರ್ ಶೆಟ್ಟಿ , ವಿಜ್ಞಾನ ಪ್ರಮುಖ್ ಪ್ರಶ್ಮಿತಾ ಬ್ರಹ್ಮಾವರ, ಸಂಸ್ಕೃತಿ ಜ್ಞಾನ ಪ್ರಮುಖ್ ಜ್ಯೋತಿ ಎಳ್ಳಾರೆ , ಗಣಿತ ಪ್ರಮುಖ್ ಶ್ರೀಮತಿ ಜ್ಯೋತಿ ಸಿದ್ದಾಪುರ ಉಪಸ್ಥಿತರಿದ್ದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಅಮೃತ ಭಾರತಿ ವಿದ್ಯಾಕೇಂದ್ರದ ಗುರೂಜಿ ಮುತ್ತಯ್ಯ ಸ್ವಾಗತಿಸಿ,
ಸೌಮ್ಯ ಡಿ ಮಾತಾಜಿ ವಂದಿಸಿದರು ನಿರೂಪಣೆ ಆಶಾ ಮಾತಾಜಿ ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ ನಿರ್ವಹಿಸಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ 12 ಶಾಲೆಗಳು ಭಾಗವಹಿಸಿದ್ದು 322 ವಿದ್ಯಾರ್ಥಿಗಳು ಸ್ಪರ್ದಾಳುಗಳಾಗಿದ್ದರು.

ಸಂಜೆ ನಡೆದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಪಡೆದವರು 4ರಿಂದ 6 ಸೆಪ್ಟೆಂಬರ್ 2026 ಬಾಲಭಾರತಿ ಕೇಂದ್ರೀಯ ವಿದ್ಯಾಲಯ, ತಾಳೂರು ರಸ್ತೆ, ಬಳ್ಳಾರಿಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಅಮೃತ ಭಾರತಿ ಟ್ರಸ್ಟ್ ನ ಸದಸ್ಯರಾಗಿರುವ ಬಾಲಕೃಷ್ಣ ಮಲ್ಯ , ಲಕ್ಷ್ಮಣ ಭಟ್ , ವಿಷ್ಣುಮೂರ್ತಿ ನಾಯಕ್ , ಅಮೃತ ಭಾರತಿ ವಸತಿ ನಿಲಯದ ಸದಸ್ಯರು ರಾಮಕೃಷ್ಣ ಆಚಾರ್ಯ, ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲರು ಅರುಣ ಎಚ್.ವೈ ,ಅಮೃತ ಭಾರತಿ ಕಾಲೇಜಿನ ಪ್ರಕಾಶ್ ಜೋಗಿ , ಅಮೃತ ಭಾರತಿ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶಕುಂತಲಾ , ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು.ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಗುರೂಜಿಯವರು ಮಾತಾಜಿ ,ಆಡಳಿತ ಮಂಡಳಿಯ ಸದಸ್ಯರು , ಅತಿಥೇಯ ಸಂಸ್ಥೆಯ ಗುರೂಜಿಯವರು ಮಾತಾಜಿ ಯವರು ಪಾಲ್ಗೊಂಡ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು.