ನಾವುಂದ : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ

0
70

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ , ಸಮೃದ್ಧ ಬೈಂದೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ಲಯನ್ಸ್ ಕ್ಲಬ್ ಉಪ್ಪುಂದ , ಜೋಗಿ ಮನೆ ಟ್ರಸ್ಟ್ ಹಳೆಗೇರಿ , ಸರ್ಕಾರಿ ಪದವಿ ಪೂರ್ವ ಕಾಲೇಜ್ ನಾವುಂದ ಇವರುಗಳ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ” ಪ್ರೇರಣಾ 2025″ ಕಾರ್ಯಕ್ರಮ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಾವುಂದದಲ್ಲಿ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್ , ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ರಾಜ್ಯ ನಿರ್ದೇಶಕ್ ಅಬ್ದುಲ್ ಸಲಾಮ್ ಚಿತ್ತೂರು, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಶಶಿಕಲಾ ಕುಂದರ್ ,ಎಂ.ಜೋಗಿ ಮನೆ ಟ್ರಸ್ಟ್ ನ ವಸಂತ ಜೋಗಿ, ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್, ಸೀನಿಯರ್ ಚೇಂಬರ್ನನ ರಾಷ್ಟ್ರೀಯ ನಿರ್ದೇಶಕೆ ಹುಸೇನ್ ಹೈಕಾಡಿ, ಎಸ್ ಡಿ ಎಂ ಸಿ ಅಧ್ಯಕ್ಷ ಸಂಜೀವ ನಾಯಕ , ಉಪಸ್ಥಿರಿದ್ದರು.

ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಲಯನ್ಸ್ ಸುಂದರ್ ಕೊಠಾರಿ, ಸಂಪನ್ಮೂಲ ವ್ಯಕ್ತಿ ಆಗಿ ಸರೋಜಾ ವಲಯ ತರಬೇತುದಾರರು ,ಹಾಗೂ ಕಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯ ಭಟ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವ ಹಿಸಿದರು .ಉಪ ಪ್ರಾಂಶುಪಾಲೆ ಶಶಿಕಲಾ ನಾಯಕ ಸ್ವಾಗತಿಸಿ ವಂದಿಸಿದರು.ಕಾರ್ಯಕ್ರಮದ ನಿರ್ದೇಶಕರು ಸುಮಾ ಆಚಾರ್ ಪ್ರಾಸವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here