ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.), ಬಂಕೇರ್ಕಟ್ಟ ಅಂಬಲಪಾಡಿ : ‘ಕೆಸರ್ಡ್ ಒಂಜಿ ದಿನ’ – ಗ್ರಾಮೀಣ ಕ್ರೀಡಾ ಕೂಟ

0
106

ಉಡುಪಿ : ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.), ಬಂಕೇರ್ಕಟ್ಟ ಅಂಬಲಪಾಡಿ ಇದರ ಆಶ್ರಯದಲ್ಲಿ ಶ್ರೀ ನಾಗರಾಜ ಸೇವಾ ಸಮಿತಿ ಮತ್ತು ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿ, ಬಂಕೇರ್ಕಟ್ಟ ಇದರ ಸಹಯೋಗದಲ್ಲಿ ‘ಕೆಸರ್ಡ್ ಒಂಜಿ ದಿನ’, ಗ್ರಾಮೀಣ ಕ್ರೀಡಾ ಕೂಟವು ಕ್ಲಬ್ಬಿನ ಅಧ್ಯಕ್ಷ ಕಾರ್ತಿಕ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬಂಕೇರ್ಕಟ್ಟ ಕೆಸರು ಗದ್ದೆಯಲ್ಲಿ ನಡೆಯಿತು.

ಕೆಸರ್ಡ್ ಒಂಜಿ ದಿನ ಗ್ರಾಮೀಣ ಕ್ರೀಡಾ ಕೂಟವನ್ನು ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ, ಗ್ರಾಮೀಣ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಮಹತ್ವಪೂರ್ಣ ಎಂದರು.

ಕೆಸರು ಗದ್ದೆಗೆ ಸಾಮೂಹಿಕ ಹಾಲು ಎರೆಯುವ ಮೂಲಕ ಗ್ರಾಮೀಣ ಕ್ರೀಡಾ ಕೂಟ ಚಾಲನೆಗೊಂಡಿತು. ವಿವಿಧ ವಯೋಮಾನದ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಯುವಕ, ಯುವತಿಯರು ಹಾಗೂ ಹಿರಿಯರು ಕ್ರೀಡಾ ಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೆಸರು ಗದ್ದೆಯಲ್ಲಿ ಸಂಭ್ರಮಿಸಿದರು. ಮಧ್ಯಾಹ್ನ ನಡೆದ ಸಾಮೂಹಿಕ ಭೋಜನದಲ್ಲಿ 500ಕ್ಕೂ ಮಿಕ್ಕಿ ಕ್ರೀಡಾ ಪಟುಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಲ್ಪೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.) ಗೌರವಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಶ್ರೀ ನಾಗರಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಾಜಿ ಸನಿಲ್, ಗೌರವಾಧ್ಯಕ್ಷರುಗಳಾದ ಸುಧಾಕರ ಮೆಂಡನ್, ವಿಶ್ವನಾಥ್ ಹೆಗ್ಡೆ, ಜಿಲ್ಲಾ ಅತ್ಲೆಟಿಕ್ ಎಸೋಸಿಯೋಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವದಾಸ್ ಪಿ., ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ದೇವದಾಸ್, ಅಪರ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಯತೀಶ್ ಕಿದಿಯೂರು, ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.) ಸ್ಥಾಪಕಾಧ್ಯಕ್ಷ ದಾಮೋದರ್ ಕುಂದರ್, ಗೌರವ ಸಲಹೆಗಾರರಾದ ರಾಜೇಶ್ ಸುವರ್ಣ, ಕಿರಣ್ ಕುಮಾರ್, ಸದಾನಂದ ಕಾಂಚನ್, ಉಪಾಧ್ಯಕ್ಷ ಗಣೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ರೂಪೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ನವೀನ್ ಸುವರ್ಣ, ಕೋಶಾಧಿಕಾರಿ ಪ್ರಸನ್ನ ಶ್ರೀಯಾನ್, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಎಸ್. ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಯತೀಶ್ ಸುವರ್ಣ, ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಲೂಯಿಸ್ ಲೋಬೊ, ವೃತ್ತಿ ಪರ ಕೃಷಿಕ ಪಠೇಲರ ಮನೆ ಶರತ್ ಶೆಟ್ಟಿ, ಶ್ರೀ ವಿಠೋಬ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಾಜೇಶ್, ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಅಧ್ಯಕ್ಷ ಸುಧಾಕರ್, ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿಯ ಉಪಾಧ್ಯಕ್ಷೆ ಲಲಿತಾ ನಾರಾಯಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಭಾರತಿ ಭಾಸ್ಕರ್, ಕ್ಲಬ್ಬಿನ ಪದಾಧಿಕಾರಿಗಳಾದ ಹಾಲೇಶ್, ಮಂಜುನಾಥ್, ಸಂತೋಷ್ ಪೂಜಾರಿ, ಸಮರ್ಥ್ ಪೂಜಾರಿ, ಯಶಸ್, ಯಶ್, ನಿಹಾಲ್, ಜನ್ವಿತ್, ದಿಶಾನ್, ಆಯುಷ್, ಪ್ರದೀಪ್ ಸಹಿತ ಸಮಿತಿ ಸದಸ್ಯರು, ಶ್ರೀ ನಾಗರಾಜ ಸೇವಾ ಸಮಿತಿಯ ಪದಾಧಿಕಾರಿಗಳು, ಕ್ರೀಡಾ ಪಟುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಉದಯೋನ್ಮುಖ ಸಂಗೀತ ಕಲಾವಿದೆ ಶ್ರೀಯಾ ಎಸ್. ಪೂಜಾರಿ ಪ್ರಾರ್ಥನೆ ಹಾಡಿದರು. ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್(ರಿ.) ಗೌರವಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರೂಪೇಶ್ ಪೂಜಾರಿ ವಂದಿಸಿದರು. ಅಶ್ವಥ್ ಪೂಜಾರಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here