ಮುಂಬೈ: ಆಗಸ್ಟ್ 9ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ದಲ್ಲಿ ರಕ್ಷಾಬಂಧನದ ಪ್ರಯುಕ್ತ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಖ್ಯಾತ ಸಹೋದರಿಯರಾದ ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ಹಾಗೂ ಹುಮಾ ಕುರೇಶಿ ಮತ್ತು ಸಕೀಬ್ ಸಲೀಮ್ ರಕ್ಷಾಬಂಧನದ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸಂಬಂಧಗಳ ಕುರಿತು ಮುಕ್ತ ಮಾತುಕತೆ ನಡೆಸಿದ್ದಾರೆ.
ಶಿಲ್ಪಾ ತಾನು 90ರ ದಶಕಕ್ಕಿಂತ ಈಗಲೇ ಸುಂದರವಾಗಿ ಕಾಣಿಸುತ್ತೇನೆ ಎಂದು ಹೇಳುವುದರಿಂದ ಹಿಡಿದು ಶಮಿತಾಳ ಡೇಟಿಂಗ್ ಕತೆಯನ್ನು ಹೇಳಿ ಚುಡಾಯಿಸುವವರೆಗೆ ಈ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಶಮಿತಾ ಪ್ರೀತಿಯನ್ನು ಕಂಡುಕೊಳ್ಳುವುದು ಬಹಳ ಕಷ್ಟ ಎಂದು ಹೇಳುತ್ತಾರೆ, ಆದರೆ ಶಿಲ್ಪಾ ತನ್ನ ಸಹೋದರಿಗೆ ಬುದ್ಧಿವಂತ ಮತ್ತು ಬಲಿಷ್ಠನಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿತ್ತಾರೆ.
ಹುಮಾ ಅವರು ಕಪಿಲ್ ಗೆ ಕಟ್ಟಲು ಒಂದು ದೊಡ್ಡ ರಾಖಿಯನ್ನು ಹಿಡಿದುಕೊಂಡು ಬರುತ್ತಾರೆ. ಜೊತೆಗೆ ಸಕೀಬ್ ಜೊತೆಗಿನ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ಸಕೀಬ್ ಅವರು ಈ ಸಂದರ್ಭದಲ್ಲಿ ತನ್ನ ಸಹೋದರಿಯಿಂದ ಕೆಲವು ವಿಷಯಗಳನ್ನು ಮರೆಮಾಚುವುದಾಗಿ ಒಪ್ಪಿಕೊಳ್ಳುತ್ತಾರೆ.
ಅಭಿಮಾನಿಗಳ ಪ್ರಪೋಸಲ್‌ಗಳು ಮತ್ತು ಸುನಿಲ್ ಗ್ರೋವರ್ ಅವರ ತಮಾಷೆ ನಗು ಮೂಡಿಸುತ್ತದೆ. ಒಟ್ಟಾರೆ ಈ ಸಂಚಿಕೆಯು ಭರಪೂರ ನಗುವಿನಿಂದ ಕೂಡಿದೆ. ಈ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ವಿಶೇಷ ಸಂಚಿಕೆಯನ್ನು ಇದೇ ಶನಿವಾರ, ಆಗಸ್ಟ್ 9ರಂದು, ಕೇವಲ ನೆಟ್‌ಫ್ಲಿಕ್ಸ್ ನಲ್ಲಿ ನೋಡಬಹುದು.

