ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಗೆ ನೂತನ ಆಡಳಿತ ಮಂಡಳಿ

0
13

ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸರ್ವಾನುಮತ ಆಯ್ಕೆ

ಬ್ರಹ್ಮಾವರ : ಬನ್ನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ 2026–27ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಸಭೆ ಭಾನುವಾರ ನಡೆಯಿತು. ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಕಂಬಳಗದ್ದೆ ಮನೆಯ ರಘುರಾಮ ಶೆಟ್ಟಿ, ಅಧ್ಯಕ್ಷರಾಗಿ ಬಿ. ವಿಶ್ವನಾಥ್ ಹೆಗ್ಡೆ, ಉಪಾಧ್ಯಕ್ಷರಾಗಿ ರಕ್ಷಿತ್ ಚೌಟ, ಕಾರ್ಯದರ್ಶಿಯಾಗಿ ಹಳೆಮನೆಯ ಸುರೇಶ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಹೆಗ್ಡೆರಮನೆಯ ಸುಭಾಶ್ಚಂದ್ರ ಶೆಟ್ಟಿ ಕೆ. ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಂಬಳಗದ್ದೆ ಮನೆಯ ಅಶೋಕ್ ಕುಮಾರ್ ಶೆಟ್ಟಿ, ಹೆಗ್ಡೆರ ಮನೆಯ ಬಿ. ಶಂಕರ್ ಶೆಟ್ಟಿ, ಕಂಬಳಗದ್ದೆ ಮನೆಯ ಪ್ರಭಾಕರ್ ಶೆಟ್ಟಿ ಹಾಗೂ ಹಳೆಮನೆಯ ಸಂತೋಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.