ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಗಾಣಿಗ ಸೌಧಕ್ಕೆ ಭೇಟಿ ನೀಡಿದ್ದ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ಅನಂತ್ ಮೈಸೂರು ಇವರು ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಪ್ರಮುಖರಾದ ರಾಮಣ್ಣ ಪೂಜಾರಿ, ಹರೀಶ ಗಾಣಿಗ ಮೈಸೂರು, ಗಣೇಶ್ ಪೂಜಾರಿ ಪೆರಾರ ಮತ್ತಿತರರು ಇದ್ದರು.

