ವಿಶ್ವ ಕೊಂಕಣಿ ಕೇಂದ್ರದಲ್ಲಿ “ವರ್ಧನಿ” ಸಹಯೋಗದೊಂದಿಗೆ ದಿ. 01-08-2026 ಮತ್ತು 02-08-2026 ರಂದು “ಸ್ಕೇಲ್ ಅಪ್” ಉದ್ಯಮ ಉನ್ನತಿ ಕೊಂಕಣಿ ಮಹಿಳಾ ಉದ್ಯಮಿಗಳಿಗೆ ಎರಡು ದಿವಸಗಳ ಸ-ನಿವಾಸ ಉಚಿತ ತರಬೇತಿ ಕಾರ್ಯಾಗಾರದ ಉದ್ಗಾಟನಾ ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೌಶಲ್ಯ ಅಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ಅಧಿಕಾರಿ ಮಾನ್ಯ ಅರವಿಂದ ಡಿ ಬಾಳೇರಿ ಅವರು ಮಾತನಾಡುತ್ತಾ ‘ಮಹಿಳೆಯರು ಸ್ವ ಉದ್ಯಮ ಚಿಂತನೆಯನ್ನು ಮೈಗೂಡಿಸಿ ವ್ಯಾಪಾರ ಕ್ಷೇತ್ರ ಬೃಹದಾಕಾರವಾಗಿ ಬೆಳೆದು ಬಂದಿದೆ ವ್ಯವಹಾರದ ಇತಿ ಮಿತಿಗಳನ್ನು ಅರಿತು ಇಂದು ಮಹಿಳೆಯರು ಉದ್ಯಮ ಶೀಲರಾಗಲು ತಮ್ಮದೇ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿರುವುದು ಉತ್ತಮ ವಿಚಾರವಾಗಿದೆ”. ಎಂದರು ತಮ್ಮ ವ್ಯವಹಾರವನ್ನು ಇನ್ನೂ ಮುಂದಕ್ಕೆ ತರುವಂತಹ ವಿಚಾರವಾಗಿ, ಕೌಶಲ್ಯ ಅಭಿವೃದ್ಧಿಗಾಗಿ ಸಮಗ್ರ ಬೆಳವಣಿಗೆಗೆಗಾಗಿ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿಶ್ವ ಕೊಂಕಣಿ ಕೇಂದ್ರದ ಪ್ರತಿಯೊಂದು ಒಳ್ಳೆಯ ಸುಸಜ್ಜಿತ ವ್ಯವಸ್ಥೆಯುಳ್ಲ ಉದ್ಯಮ ಉನ್ನತಿ ಕಾರ್ಯಾಗಾರದ ಪ್ರಯೋಜನ ಪಡೆಯಬೇಕು. ಎಂದು ಶುಭ ಹಾರೈಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕರಾದ ನಂದಗೋಪಾಲ ಶೆಣೈ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಎಲ್ಲರನ್ನೂ ಸ್ವಾಗತಿಸುತ್ತಾ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಎಲ್ಲಾ ಮಹಿಳಾ ಉದ್ಯಮಿಗಳು ಯಾವತ್ತು ಬೇರೆಯವರೊಂದಿಗೆ ತುಲನಾತ್ಮಕವಾಗಿ ಕಾಣದೇ ಸಬಲೀಕರಣ ಗೊಂಡು ನಮ್ಮ ನಮ್ಮ ಏಳಿಗೆಗೆ ನಾವೇ ಕಾರಣೀಭೂತರಾಗಬೇಕು. ಆತ್ಮವಿಶ್ವಾಸ ಹಾಗೂ ಛಲ ಸಾಧನೆಯಿದ್ದಲ್ಲಿ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ ಡಿ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಚಿತ್ರಾ ಎಸ್ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು. ಲಕ್ಶ್ಮೀ ಕಿಣಿ ಕೊಂಕಣಿ ಅಭಿಮಾನ ಗೀತೆ ಗಾಯನ ಮಾಡಿದರು, ರಕ್ಷಾ ಶೆಣೈ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು. ಬೇರೆ ಬೇರೆ ಪ್ರದೇಶಗಳಿಂದ ಆಗಮಿಸಿದ 50 ಮಹಿಳಾ ಉದ್ಯಮಿಗಳು ಉತ್ಸಾಹದಿಂದ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಲು ಪಾಲ್ಗೊಂಡಿದ್ದರು. 16 ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು.

