ನವ ಮುಂಬೈ ಲಿ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಸಮಾಲೋಚನಾ ಸಭೆ

0
4

ತಾ 18ನೇ ಜೂಲೈ ಶನಿವಾರ ನವಮುಂಬೈಯ ನೂತನ ಶಾಖೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಪೂಜ್ಯ ಶ್ರೀಪಾದರ 53ನೇ ಹಾಗೂ ಮುಂಬೈಯಲ್ಲಿ 8ನೇ ಚಾತುರ್ಮಾತ್ಸ್ಯ ಸಮಾಲೋಚನಾ ಸಭೆ ನಡೆಯಿತು,

ಚಾತುರ್ಮಾತ್ಸ್ಯ ಸಮಿತಿಯ ಅಧ್ಯಕ್ಷರಾಗಿ ಶ್ರೀ ಶಿವರಾಮ ಶೆಟ್ಟಿ ಅಜೆಕಾರ್, ಎಲ್ಲರ ಅಪೇಕ್ಷೆಯಮೇರೆಗೆ ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ವಿದ್ವಾನ್ ಪ್ರಹಲ್ಲಾದ ಆಚಾರ್ಯ ನಾಗರ ಹಳ್ಳಿ, ಕರ್ನಾಟಕದ ನಿವೃತ್ತ ನ್ಯಾಯಾಧೀಶರಾದ ದಿನೇಶ್ ಕುಮಾರ್, ಮುಂಬೈಯ ಪ್ರಸಿದ್ಧ ಗೋಕುಲದ ಅಧ್ಯಕ್ಷರಾದ ಡಾ ಸುರೇಶ ರಾವ್, ಹಾಗೂ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಆದ ಏನ್ ಆರ್ ರಾವ್ ಇವರುಗಳನ್ನು ನೇಮಿಸಲಾಯಿತು, ಪೂಜ್ಯ ಶ್ರೀಪಾದರ ಆಪ್ತರಾದ ಬಿ ಆರ್ ಶೆಟ್ಟಿ ಅಣ್ಣಿ ಶೆಟ್ಟಿ ಘಂನ್ಸೋಲಿ, ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜಶೆಟ್ಟಿಮ ಸುರೇಶ ಕಾಂಚನ್, ಹಾಗೂ ಹರೀಶ್ ಅಮೀನ್, ಸೂರ್ಯಕಾಂತ್, ಉಪಾಧ್ಯಕ್ಷರುಗಳಾಗಿ ನೇಮಿಸಲಾಯಿತು,

ಕಾರ್ಯಧ್ಯಕ್ಷರಾಗಿ ಕಳತ್ತೂರು ಗೋಪಾಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ,. ಪತ್ರಕರ್ತರಾದ ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾಗಿ ವಿದ್ವಾನ್ ರಾಘವೇಂದ್ರ ಜಮದಗ್ನಿ, ಹಾಗೂ ವಿದ್ವಾನ್ ಗುರುಪ್ರಸಾದ್ ಘಂನ್ಸೋಲಿ ಆಯ್ಕೆ ಮಾಡಲಾಯಿತು,

ಕಜಾಂಜಿಗಳಾಗಿ – ಸಂತೋಷ್ ಸಿ ಶೆಟ್ಟಿ, ಸಹ ಕಜಾಂಜಿಗಳಾಗಿ ಗುರುಪ್ರಸಾದ್ ಚೆಂಬೂರು, ಹಾಗೂ ಪ್ರಧಾನ ಸಂಚಾಲಕರಾಗಿ ಸುಧೀರ್ ಆರ್ ಎಲ್ ಶೆಟ್ಟಿ ನೇಮಕಗೊಂಡರು,

ಬೆಂಗಳೂರು ಗೋವರ್ಧನ ಕ್ಷೇತ್ರದ ಮೇಲ್ವಿಚಾರಕರಾದ ಏ ಬಿ ಕುಂಜಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು,

ತಾ 10ನೇ ಆಗಷ್ಟ್ ಪೂಜ್ಯ ಶ್ರೀಪಾದರ ಚಾತುರ್ಮಾತ್ಸ್ಯ ಪ್ರಯುಕ್ತ ನವಮುಂಬೈ ಪುರಪ್ರವೇಶ ನಡೆಯಲಿದ್ದು, ತಾ 12ಕ್ಕೆ ಶ್ರೀಪಾದರು ಚಾತುರ್ಮಾಸ್ಯ ವೃತ ಕೈಗೊಳ್ಳಲಿದ್ದಾರೆ,

ತಾ 15 ಆಗಸ್ಟ್ ನವ ಮುಂಬೈಯಲ್ಲಿ ಇರುವ ಪುತ್ತಿಗೆ ಮಠದ ನೂತನ ಶಾಖೆ ಲೋಕಾರ್ಪಣೆಗೊಳ್ಳಲಿದೆ